ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಮಾನವೀಯ ಘಟನೆ ನಡೆದಿದ್ದು, ಸಾಲ ವಾಪಸ್ ನೀಡದ ಯುವಕನ ಕೈ ಕಾಲು ಕಟ್ಟಿ ಥಳಿಸಿದ ಘಟನೆ ನಡೆದಿದೆ.
5 ಸಾವಿರ ರೂಪಾಯಿ ಸಾಲ ಪಡೆದು ವಾಪಸ್ ಕೊಟ್ಟಿಲ್ಲ ಎಂದು ಯುವಕನ ಕೈ ಕಾಲು ಕಟ್ಟಿ ಹಲ್ಲೆ ನಡೆಸಿದ ಘಟನೆ ಕೊಪ್ಪ ತಾಲೂಕಿನ ಕರ್ಕೇಶ್ವರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸತೀಶ್ ಎಂಬಾತ 5 ಸಾವಿರ ಹಣ ಸಾಲ ಪಡೆದಿದ್ದನು, ಸರಿಯಾದ ಸಮಯಕ್ಕೆ ವಾಪಸ್ ನೀಡಿಲ್ಲ ಎಂದು ಕೈ ಕಾಲು ಕಟ್ಟಿ ಮರಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 6 ಮಂದಿ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.