ಇಂಗು ಹಲವು ಆರೋಗ್ಯದ ಸಮಸ್ಯೆಗಳನ್ನು ದೂರಮಾಡುವ ಶಕ್ತಿ ಹೊಂದಿರುವ ಅಪರೂಪದ ವಸ್ತು. ಬೇಳೆಗಳನ್ನು ಬಳಸಿ ಮಾಡುವ ಆಹಾರಗಳಿಗೆ ಇಂಗನ್ನು ಬಳಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಕಾಡದು.
ಹೊಟ್ಟೆಯುಬ್ಬರಿಸಿ ಬಂದು ವಿಪರೀತ ನೋಯುತ್ತಿದ್ದರೆ ಒಂದು ಲೋಟ ಮಜ್ಜಿಗೆಗೆ ಚಿಟಿಕೆ ಉಪ್ಪು ಮತ್ತು ಇಂಗು ಹಾಕಿ ಕರಗಿಸಿ ಕುಡಿಯಿರಿ. ಅರ್ಧ ಗಂಟೆಯೊಳಗೆ ಹೊಟ್ಟೆ ನೋವಿನ ಸಮಸ್ಯೆ ದೂರವಾಗುತ್ತದೆ.
ಇಂಗಿಗೆ ರಕ್ತದೊತ್ತಡದ ಮಟ್ಟವನ್ನು ಮತ್ತು ರಕ್ತದ ಹರಿವನ್ನು ಸುಧಾರಿಸುವ ಗುಣವಿದ್ದು ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ತಿಂಗಳ ರಜೆಯ ವೇಳೆ ಉಂಟಾಗುವ ಹೊಟ್ಟೆ ನೋವಿನ ನಿವಾರಣೆಗೆ ಮೆಂತೆ ಪುಡಿಗೆ ಚಿಟಿಕೆ ಉಪ್ಪು, ಇಂಗು ಮತ್ತು ಮಜ್ಜಿಗೆ ಸೇರಿಸಿ ಕುಡಿಯಿರಿ.
ಇಂಗನ್ನು ನೀರಿನಲ್ಲಿ ಕುದಿಸಿ ಕುಡಿದರೆ ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಕಿಡ್ನಿಯನ್ನು ಸ್ವಚ್ಛಗೊಳಿಸಿ ಮೂತ್ರ ಸಂಬಂಧಿ ಸೋಂಕುಗಳನ್ನು ದೂರಮಾಡುತ್ತದೆ.