ಕಾಸರಗೋಡು: ಕೇರಳದ ಕಾಸರಗೋಡಿನಲ್ಲಿ ಹೆಬ್ಬಾವು ಮೊಟ್ಟೆಗಳಿಗೆ ಕಾವು ಕೊಡಲು 54 ದಿನಗಳ ಕಾಲ ಹೆದ್ದಾರಿ ಕಾಮಗಾರಿ ನಿಲ್ಲಿಸಿದ ಘಟನೆ ನಡೆದಿದೆ.
ಕಾಸರಗೋಡಿನಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಿಸುತ್ತಿರುವ ಉರಾಳುಂಗಲ್ ಲೇಬರ್ ಕಾಂಟ್ರಾಕ್ಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್(ಯುಎಲ್‌ಸಿಸಿಎಸ್) 54 ದಿನಗಳ ಕಾಲ ಮೋರಿ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿದ್ದು, ಹೆಬ್ಬಾವು 24 ಮೊಟ್ಟೆಗಳನ್ನು ಮರಿ ಮಾಡಲು ಅವಕಾಶ ಮಾಡಿಕೊಟ್ಟಿದೆ.
ಅರಣ್ಯ ಇಲಾಖೆ, ಕಂಪನಿ ಮತ್ತು ಹಾವು ರಕ್ಷಕರು ಹಾವುಗಳನ್ನು ಜಗತ್ತಿಗೆ ತರಲು ಸಂಘಟಿತ ಪ್ರಯತ್ನ ನಡೆಸಿದ್ದಾರೆ. ಎಲ್ಲಾ 24 ಮೊಟ್ಟೆಗಳು ಒಡೆದವು. ನಾವು ಮರಿಗಳನ್ನು ಕಾಡಿಗೆ ಬಿಟ್ಟಿದ್ದೇವೆ ಹಾವು ರಕ್ಷಕ ಅಮೀನ್ ಅಡ್ಕತ್ಬೈಲ್ ಹೇಳಿದ್ದಾರೆ.
ಮಾರ್ಚ್ 20 ರಂದು, NH 66 ರ ಅಗಲೀಕರಣದ ಭಾಗವಾಗಿ ಕಲ್ವರ್ಟ್ ನಿರ್ಮಿಸುವ ಕಾರ್ಮಿಕರು, CPCRI ಬಳಿಯ ಎರಿಯಾಲ್‌ನಲ್ಲಿ ಭಾರತೀಯ ರಾಕ್ ಹೆಬ್ಬಾವು ಬಿಲದೊಳಗೆ ಸುತ್ತಿಕೊಂಡಿರುವುದನ್ನು ಕಂಡು ಅರಣ್ಯ ಇಲಾಖೆಗೆ ಕರೆ ಮಾಡಿದ್ದಾರೆ.
ಬಿಲ ರಸ್ತೆ ಮಟ್ಟದಿಂದ ನಾಲ್ಕು ಅಡಿಗಳಷ್ಟು ಕೆಳಗಿತ್ತು. ಅರಣ್ಯ ಇಲಾಖೆ ಯುಎಲ್‌ಸಿಸಿಎಸ್ ಗೆ ಕಲ್ವರ್ಟ್ ಕೆಲಸವನ್ನು ಸ್ಥಗಿತಗೊಳಿಸಲು ತಿಳಿಸಿದೆ. ಕಾಲಮಿತಿಯ ಯೋಜನೆಯಾಗಿದ್ದರೂ ಅದಕ್ಕೆ ಒಪ್ಪಿಗೆ ನೀಡಲಾಗಿದ್ದು, ಎನ್‌ಹೆಚ್‌ಎಐಗೆ ತೆರಳಿ ಕಾಮಗಾರಿ ನಿಲ್ಲಿಸಲು ಅನುಮತಿ ಪಡೆಯುವುದು ತೊಡಕಾಗಿತ್ತು ಎಂದು ಕಾಸರಗೋಡಿನ ವಿಭಾಗೀಯ ಅರಣ್ಯಾಧಿಕಾರಿ ಪಿ. ಬಿಜು ತಿಳಿಸಿದ್ದಾರೆ.
ಹೆಬ್ಬಾವುಗಳನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆಯ ಶೆಡ್ಯೂಲ್ I ಅಡಿಯಲ್ಲಿ ವರ್ಗೀಕರಿಸಲಾಗಿದೆ. ಅವುಗಳಿಗೆ ಭಾರತದಲ್ಲಿ ಹುಲಿಗಳಂತೆಯೇ ಉನ್ನತ ಮಟ್ಟದ ಕಾನೂನು ರಕ್ಷಣೆ ಇದೆ.
ಜೀವನೋಪಾಯಕ್ಕಾಗಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಘಟಕ ನಡೆಸುತ್ತಿರುವ ಅಮೀನ್ ಅವರನ್ನು ಅರಣ್ಯ ಇಲಾಖೆ ಕರೆಸಿ, ಹಾವುಗಳನ್ನು ರಕ್ಷಿಸುತ್ತಿದೆ. ಅಮೀನ್ ಬಿಲದೊಳಗೆ ಪರಿಶೀಲಿಸಿದಾಗ ಮೊಟ್ಟೆಗಳು, ಅವುಗಳ ಸುತ್ತಲೂ ಹೆಬ್ಬಾವು ಸುತ್ತಿಕೊಂಡಿರುವುದು ಕಾಣಿಸಿದೆ.
ನೇಪಾಳದ ಮಿಥಿಲಾ ವೈಲ್ಡ್ ಲೈಫ್ ಟ್ರಸ್ಟ್ ನಲ್ಲಿ ಹರ್ಪಿಟಾಲಜಿಸ್ಟ್ ಮತ್ತು ವೈಲ್ಡ್ ಲೈಫ್ ರಿಸರ್ಚ್ ನ ಮುಖ್ಯಸ್ಥರಾದ ಕಾಸರಗೋಡು ಮೂಲದ ಮವೀಶ್ ಕುಮಾರ್ ಅವರನ್ನು ಸಂಪರ್ಕಿಸಿದ್ದು, ತಾಯಿ ಹೆಬ್ಬಾವಿನ ಉಷ್ಣತೆಯಿಲ್ಲದೆ ಮೊಟ್ಟೆಗಳು ಮರಿಯಾಗದ ಕಾರಣ ಮೊಟ್ಟೆಗಳನ್ನು ಸ್ಥಳಾಂತರಿಸದಂತೆ ಮವೀಶ್ ನನಗೆ ಸಲಹೆ ನೀಡಿದರು ಎಂದು ಅಮೀನ್ ತಿಳಿಸಿದ್ದಾರೆ.
ಹೆಬ್ಬಾವಿನ ಮೊಟ್ಟೆಗಳಿಗೆ ಕಾವುಕೊಡಲು 27 ಡಿಗ್ರಿ ಸೆಲ್ಸಿಯಸ್ ಮತ್ತು 31 ಡಿಗ್ರಿ ಸೆಲ್ಸಿಯಸ್ ನಡುವೆ ನಿಯಂತ್ರಿತ ತಾಪಮಾನ ಬೇಕಾಗುತ್ತದೆ. ಇಲ್ಲಿದಿದ್ದರೆ ಮೊಟ್ಟೆ ಹಾಳಾಗುತ್ತವೆ. ಸರಿಯಾದ ತಾಪಮಾನದಲ್ಲಿ ಇಡಲು ತಾಯಿ ಹಾವು ಮೊಟ್ಟೆಗಳನ್ನು ಸುತ್ತಿಕಾವು ಕೊಡುತ್ತದೆ. ಇದೆಲ್ಲ ಬೆಳವಣಿಗೆ ನಂತರ ಮೊಟ್ಟೆಗಳಿಂದ ಮರಿಗಳು ಹೊರ ಬಂದಿದ್ದು, ಅವುಗಳನ್ನು ಕಾಡಿಗೆ ಬಿಡಲಾಗಿದೆ.