ಹುಬ್ಬಳ್ಳಿ: ಹುಬ್ಬಳ್ಳಿಯ ಗೋಕುಲ ರಸ್ತೆ ವಿಮಾನ ನಿಲ್ದಾಣ ಸಮೀಪ ಇರುವ ಇನ್ಫೋಸಿಸ್ ಸಂಸ್ಥೆ ವಿವಿಧ ಹಂತದ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಕೈಗೊಂಡು ಐಟಿ ಚಟುವಟಿಕೆ ವಿಸ್ತರಿಸಲು ಮುಂದಾಗಿದೆ.
ಕೆಲವು ವರ್ಷಗಳ ಹಿಂದೆಯೇ ಹುಬ್ಬಳ್ಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಇನ್ಫೋಸಿಸ್ ಸಂಸ್ಥೆಯು ಕಟ್ಟಡ ಸೇರಿದಂತೆ ಮೂಲ ಸೌಕರ್ಯ ನಿರ್ಮಿಸಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಐಟಿ ಚಟುವಟಿಕೆ ವಿಸ್ತರಿಸಲು ಮುಂದಾಗಿದ್ದರೂ ಕಾರ್ಯ ಚಟುವಟಿಕೆ ಆರಂಭಿಸಿರಲಿಲ್ಲ.
ಈ ಬಗ್ಗೆ ಉತ್ತರ ಕರ್ನಾಟಕ ಭಾಗದ ಪ್ರತಿಭಾವಂತರಿಂದ ಆಕ್ಷೇಪ ವ್ಯಕ್ತವಾಗಿತ್ತು. ಶಾಸಕ ಅರವಿಂದ ಬೆಲ್ಲದ ಅವರು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಐಟಿ ಬೆಳವಣಿಗೆಗಾಗಿ ಜಮೀನು ಪಡೆದುಕೊಂಡು ಹಾಗೆಯೇ ಬಿಡಲಾಗಿದೆ ಎಂದು ಆಕ್ಷೇಪಿಸಿದ್ದರು.
ಇವೆಲ್ಲ ಬೆಳವಣಿಗೆಗಳ ಬಳಿಕ ಹುಬ್ಬಳ್ಳಿ ಇನ್ಫೋಸಿಸ್ ನಲ್ಲಿ ಪವರ್ ಪ್ರೋಗ್ರಾಮರ್, ಸೀನಿಯರ್ ಟೆಕ್ನಾಲಜಿಸ್ಟ್, ಸೈಬರ್ ಸೆಕ್ಯೂರಿಟಿ ಎಕ್ಸ್ಪರ್ಟ್ಸ್ ಸೇರಿದಂತೆ 15 ವಿಭಾಗಗಳಲ್ಲಿ ಹುದ್ದೆಗಳ ಭರ್ತಿಗೆ ಇನ್ಫೋಸಿಸ್ ಮುಂದಾಗಿದೆ.