ದೇಶದ ಐಟಿ ಕ್ಷೇತ್ರದ ದಿಗ್ಗಜ ಇನ್ಫೋಸಿಸ್ 2021-22ರ ವಿತ್ತೀಯ ವರ್ಷದ ಮೂರನೇ ತ್ರೈಮಾಸಿಕದಲ್ಲಿ 5,809 ಕೋಟಿ ರೂ.ಗಳ ನಿವ್ವಳ ಲಾಭ ದಾಖಲಿಸಿದ್ದು, ಒಟ್ಟಾರೆ 31,867 ಕೋಟಿ ರೂ.ಗಳ ಆದಾಯ ಕಂಡಿದೆ.
ದೇಶದ ಎರಡನೇ ದೊಡ್ಡ ಐಟಿ ಕಂಪನಿಯಾದ ಇನ್ಫೋಸಿಸ್, ಡಿಜಿಟಲ್ ಸೇವೆಗಳಿಗೆ ಬೇಡಿಕೆ ಹೆಚ್ಚಿರುವ ಸಂದರ್ಭದಲ್ಲಿ ಮೆಗಾ ಡೀಲ್ಗಳ ಮೂಲಕ ತನ್ನ ಮಾರುಕಟ್ಟೆ ಮೌಲ್ಯದಲ್ಲಿ 7.2 ಪ್ರತಿಶತ ವೃದ್ಧಿ ಕಂಡಿದೆ.
MI-17V5 ಹೆಲಿಕಾಪ್ಟರ್ ದುರಂತ ಪ್ರಕರಣ; ಮದ್ರಾಸ್ ರೆಜಿಮೆಂಟ್ ಸೆಂಟರ್ ನಲ್ಲಿ ಹುತಾತ್ಮ ವೀರಯೋಧರಿಗೆ ಗೌರವ ನಮನ
2013-14ರಿಂದ ಅತ್ಯಂತ ಹೆಚ್ಚಿನ ವಾರ್ಷಿಕ ಪ್ರಗತಿ ಕಂಡಿರುವ ಇನ್ಫೋಸಿಸ್, 2021-22ರಲ್ಲಿ ಒಟ್ಟಾರೆ ಆದಾಯ ವೃದ್ಧಿಯ ದರವನ್ನು 19.5-20%ನಲ್ಲಿ ಕಾಣುವ ಸಾಧ್ಯತೆ ಇದೆ. ಕಂಪನಿಯ ಮಾರಾಟಗಳು ಈ ಅವಧಿಯಲ್ಲಿ 24%ನಷ್ಟು ಹೆಚ್ಚಳವಾಗಿವೆ.
ಇದೇ ಅವಧಿಯಲ್ಲಿ, ತನ್ನ ಕಂಪನಿಯನ್ನು ತೊರೆದು ಹೋಗುವ ಪ್ರತಿಭೆಗಳನ್ನು ಸಂಭಾಳಿಸಲು ಇನ್ಫೋಸಿಸ್ ಹೋರಾಡುತ್ತಿದೆ. ಕಂಪನಿಯ ಬಿಡುತ್ತಿರುವ ಪ್ರತಿಭೆಗಳ ದರವು 25%ನಷ್ಟು ಇದೆ.