ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲೀಲ್ ಪರೇಖ್ ಅವರ ವರ್ಷದ ಸಂಬಳ ಎಷ್ಟಿದೆ ಎಂದು ತಿಳಿದರೆ ನೀವು ದಂಗಾಗದೇ ಇರುವುದಿಲ್ಲ. ಇವರ ಸಂಬಳ ಸಿಲಿಕಾನ್ ವ್ಯಾಲಿಯ ಕಂಪನಿಗಳ ಮುಖ್ಯಸ್ಥರಿಗಿಂತ ದುಪ್ಪಟ್ಟಿದೆ.
ನೋಡಿ, ಪರೇಖ್ ಅವರ ವಾರ್ಷಿಕ ಸಂಬಳ ಬರೋಬ್ಬರಿ 79.75 ಕೋಟಿ ರೂಪಾಯಿಗಳು…! ಇದು ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ಅವರ ಸಂಬಳಕ್ಕಿಂತ ಹೆಚ್ಚು. ಅಂದರೆ, ಪರಾಗ್ ಅವರ ವಾರ್ಷಿಕ ವೇತನ 1 ಮಿಲಿಯನ್ ಡಾಲರ್ ನಷ್ಟಿದೆ.
ಹೊಳೆಯುವ ಕೂದಲು ನಿಮ್ಮದಾಗಬೇಕಾ..…?
ಪರೇಖ್ ಅವರ ಸಂಬಳ ಇಷ್ಟೊಂದು ಹೆಚ್ಚಾಗಲು ಪ್ರಮುಖ ಕಾರಣ, ಈ ವರ್ಷ ಅವರ ವೇತನವನ್ನು ಶೇ.88 ರಷ್ಟು ಹೆಚ್ಚಳ ಮಾಡಲಾಗಿದೆ. ಈ ಮೂಲಕ ಪರೇಖ್ ಅವರು ಭಾರತದಲ್ಲಿ ಅತಿ ಹೆಚ್ಚು ವೇತನ ಪಡೆಯುತ್ತಿರುವ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ.
ಪಾಲುದಾರರ ವಾರ್ಷಿಕ ವರದಿಯಲ್ಲಿ ಇನ್ಫೋಸಿಸ್ ತನ್ನ ಸಿಇಒ ವೇತನದ ವಿವರಗಳನ್ನು ಬಹಿರಂಗಪಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಸಂಸ್ಥೆಯ ಬೆಳವಣಿಗೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಪರೇಖ್ ಅವರದ್ದಾಗಿರುವುದರಿಂದ ಅವರ ವೇತನವನ್ನು ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗಿದೆ.