ಬೆಂಗಳೂರು: 2024ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಉತ್ತೀರ್ಣತಾ ಪ್ರಮಾಣ ಪತ್ರಗಳನ್ನು ಪಡಯಲು ತಿಳಿಸಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ “http://kpsc.kar.nic.in” ನ “Departmental Examination 2024 I session” ಲಿಂಕ್ ಮುಖಾಂತರ ಡಿಜಿಲಾಕರ್ ಅಕೌಂಟ್‌ನೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಿನಂತರ ಅಭ್ಯರ್ಥಿಯ ನೋಂದಣಿ ಸಂಖ್ಯೆ(7 ಅಂಕಿಗಳು) ಯನ್ನು Username ಆಗಿ ಮತ್ತು ಪಾನ್ ಕಾರ್ಡ್ ನಂಬರ್‌ನ್ನು ಪಾಸ್‌ವರ್ಡ್ ಆಗಿ ಉಪಯೋಗಿಸಿ ಪ್ರಮಾಣ ಪತ್ರಗಳನ್ನು ಲಾಗಿನ್ ಆದ 3 ರಿಂದ 4 ಗಂಟೆಗಳೊಳಗಾಗಿ ಪಡೆಯಬಹುದಾಗಿದೆ.
ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವ ಹಂತದಲ್ಲಿ ಯಾವುದಾದರೂ ತಾಂತ್ರಿಕ ದೋಷ ಉಂಟಾದಲ್ಲಿ ಸೇವಾಸಿಂಧು ಸಹಾಯವಾಣಿ ಸಂಖ್ಯೆಗಳು 080-22279954, 8792662814 ಮತ್ತು 8792662816 ಸಂಪರ್ಕಿಸಬಹುದು.
31.12.2024 20 ಮೇಲಿನ ವಿಧಾನವನ್ನು ಅನುಸರಿಸಿ ಉತ್ತೀರ್ಣತಾ ಪ್ರಮಾಣ ಪತ್ರಗಳನ್ನು Download ಮಾಡಿಕೊಳ್ಳಬಹುದು ಎಂದು ಕರ್ನಾಟಕ ಲೋಕಸೇವಾ ಆಯೋಗದ ಇಲಾಖಾ ಪರೀಕ್ಷಾ ಶಾಖೆ ಉಪ ಕಾರ್ಯದರ್ಶಿ ತಿಳಿಸಿದ್ದಾರೆ.