ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಿದೆ.
ವಿವಿಧ ವಿಷಯವಾರು ಆಯ್ಕೆಯಾದವರ ಹೆಸರನ್ನು ಕನ್ನಡ, ಇಂಗ್ಲಿಷ್, ಐಚ್ಛಿಕ ವಿಷಯಗಳಲ್ಲಿ ಪಡೆದಿರುವ ಅಂಕಗಳು ಮತ್ತು ಒಟ್ಟು ಅಂಕಗಳ ಮೊತ್ತವನ್ನು ನೀಡಲಾಗಿದೆ. ಒಟ್ಟಾರೆ 27 ವಿಷಯಗಳಲ್ಲಿ ನೇಮಕಾತಿಗೆ ಅರ್ಹರಾದವರ ಪಟ್ಟಿಯನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ.
ಎರಡು ಅಥವಾ ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಶೇಕಡವಾರು ಅಂಕಗಳು ಸಮನಾಗಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ಅನುಸರಿಸಲಾಗುವ ಅರ್ಹತೆಯ ಕ್ರಮವನ್ನು ವಯೋಮಿತಿ ಹಿರಿತನದ ಆಧಾರದ ಮೇಲೆ ನಿಗದಿಪಡಿಸಲಾಗಿದೆ. ಹುಟ್ಟಿದ ದಿನವೂ ಒಂದೇ ಆಗಿದ್ದಲ್ಲಿ ಅರ್ಹತೆಯ ಕ್ರಮ ನಿರ್ಧರಿಸಲು ಸರ್ಕಾರದಿಂದ ಸ್ಪಷ್ಟೀಕರಣ ಕೋರಲಾಗಿದೆ ಎಂದು ಹೇಳಲಾಗಿದೆ.