ಸಿದ್ಧೇಶ್ ಲೋಕರೆ ಎಂಬ ಕಂಟೆಂಟ್ ಕ್ರಿಯೇಟರ್ ಒಬ್ಬರು ಹಾರ್ಡ್‌ವರ್ಕಿಂಗ್ ಡೆಲಿವರಿ ಏಜೆಂಟ್‌ಗಳಿಗಾಗಿ ಸಣ್ಣ ರಿಲ್ಯಾಕ್ಸ್ ಸ್ಟೇಷನ್ ಅನ್ನು ರಚಿಸಿದ್ದಾರೆ. ರಸ್ತೆಯ ಪಕ್ಕದಲ್ಲೆ ತೆರೆದಿರುವ ಈ ಸ್ಟಾಲ್‌ನಲ್ಲಿ ಏಜೆಂಟರಿಗೆ ಚಹಾ, ಸಮೋಸಾ ಮತ್ತು ತಿಂಡಿಗಳು ಮತ್ತು ರೇನ್‌ಕೋಟ್‌ಗಳನ್ನು ಉಚಿತವಾಗಿ ಒದಗಿಸುತ್ತಿದ್ದಾರೆ.
ಫುಡ್ ಡೆಲಿವರಿ ಆ್ಯಪ್ ಮೂಲಕ ಆಹಾರಕ್ಕಾಗಿ ಆರ್ಡರ್ ಮಾಡಿದಾಗ ಸಮಯಕ್ಕೆ ಸರಿಯಾಗಿ ಡೆಲಿವರಿ ಏಜೆಂಟ್ ಮೂಲಕ ಅದನ್ನು ತಲುಪಿಸಬೇಕಾಗಿರುತ್ತದೆ. ಆದ್ರೆ ಮಳೆಗಾಲದಲ್ಲಿ ಮೆಟ್ರೋ ನಗರಗಳಲ್ಲಿ ಈ ರೀತಿಯ ಕಾರ್ಯ ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ. ಆದ್ರೆ ಹವಾಮಾನ ಪರಿಸ್ಥಿತಿಗಳು ಭೀಕರವಾಗಿದ್ದರೂ ಸಹ ಡೆಲಿವರಿ ಏಜೆಂಟ್‌ಗಳು ತಮ್ಮ ಟಾರ್ಗೆಟ್ ನ್ನು ತಲುಪಬೇಕಾಗುತ್ತದೆ.
ಅದಕ್ಕಾಗಿಯೇ ಸಿದ್ಧೇಶ್ ಲೋಕರೆ ಎಂಬ ಕಂಟೆಂಟ್ ಕ್ರಿಯೇಟರ್ ಕಠಿಣ ಕೆಲಸ ಮಾಡುವ ಡೆಲಿವರಿ ಏಜೆಂಟ್‌ಗಳಿಗಾಗಿ ಸಣ್ಣ ರಿಲ್ಯಾಕ್ಸ್ ಸ್ಟೇಷನ್ ಅನ್ನು ರಚಿಸಿದ್ದಾರೆ.
ಇನ್ನು ಈ ರಿಲ್ಯಾಕ್ಸ್ ಸ್ಟೇಷನ್ ನಿರ್ಮಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ಧೇಶ್ ಲೋಕರೆ, ಈ ವಿಶ್ರಾಂತಿ ನಿಲ್ದಾಣವು ನಮ್ಮ ಡೆಲಿವರಿ ನೆಟ್‌ವರ್ಕ್ ಪ್ರದರ್ಶಿಸಿದ ಎಲ್ಲಾ ಪ್ರಯತ್ನಗಳು ಮತ್ತು ಶೌರ್ಯಗಳ ಸಂಕೇತವಾಗಿದೆ. ಅವರು ನಮಗೆ ಸೌಕರ್ಯ ಮತ್ತು ಆಹಾರವನ್ನು ಒದಗಿಸಲು ಎಂದಿಗೂ ವಿಫಲರಾಗುವುದಿಲ್ಲ. ಆದರೂ ಅವರು ತಮ್ಮ ಉದ್ಯೋಗಗಳಿಗಾಗಿ ಬೆಳೆಸಿಕೊಂಡ ಹೆಮ್ಮೆ ಮತ್ತು ಉತ್ಸಾಹವನ್ನು ನಾನು ಅನುಭವಿಸಿದೆ ಎಂದು ಹೇಳಿದ್ದಾರೆ. ಮಾನ್ಸೂನ್ ಅಥವಾ ಬೇಸಿಗೆಯನ್ನು ಲೆಕ್ಕಿಸದೆ ಅವರು ಮಾಡುವ ಕೆಲಸವನ್ನು ಅವರು ಇಷ್ಟಪಡುತ್ತಾರೆ ಎಂದಿದ್ದಾರೆ.
ಇನ್ನು ಸಿದ್ಧೇಶ್ ಲೋಕರೆ ಮಾಡುತ್ತಿರುವ ಈ ಕಾರ್ಯಕ್ಕೆ ನೆಟ್ಟಿಗರು ಸಹ ಸಾಕಷ್ಟು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಲೋಕರೆಯವರ ಚಿಂತನಶೀಲ ನಡೆಗೆ ಜನ ಧನ್ಯವಾದ ಅರ್ಪಿಸಿದ್ದಾರೆ.