ಬಂಜೆತನವು ಗಂಭೀರ ಸಮಸ್ಯೆಗಳಲ್ಲೊಂದು. ಇದು ಅನೇಕ ದಂಪತಿಗಳ ಸಂಬಂಧಕ್ಕೇ ಮಾರಕವಾಗಬಹುದು. ಬಂಜೆತನದಿಂದಾಗಿ ದಂಪತಿಗಳು ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಎದುರಿಸುತ್ತಾರೆ. ಮಕ್ಕಳನ್ನು ಪಡೆಯಲು ಹೋರಾಡುವ ದಂಪತಿಗಳು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಭಾವನೆಗಳನ್ನು ನಿಯಂತ್ರಿಸಿ – ಬಂಜೆತನದಿಂದ ಉಂಟಾಗುವ ಒತ್ತಡ ಮತ್ತು ಆತಂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ಯೋಗ, ಧ್ಯಾನ ಅಥವಾ ಮನೋವೈದ್ಯರ ಸಹಾಯವನ್ನು ತೆಗೆದುಕೊಳ್ಳಬಹುದು.
ಧನಾತ್ಮಕ ಆಲೋಚನೆಗಳು – ಮಾನಸಿಕ ಆರೋಗ್ಯಕ್ಕೆ ಧನಾತ್ಮಕ ಆಲೋಚನೆಗಳನ್ನು ಹೊಂದಿರುವುದು ಬಹಳ ಮುಖ್ಯ. ಬಂಜೆತನದ ಚಿಕಿತ್ಸೆಯಲ್ಲಿ ಧನಾತ್ಮಕ ಚಿಂತನೆಯು ಸಹಾಯಕವಾಗುತ್ತದೆ.
ನಿಮಗಾಗಿ ಸಮಯ ಮೀಸಲಿಡಿ – ಬಂಜೆತನದ ಚಿಕಿತ್ಸೆಯ ಜೊತೆಗೆ ನಿಮಗಾಗಿ ಸಮಯವನ್ನು ಮೀಸಲಿಡಿ. ನಿಮ್ಮ ಆಯ್ಕೆಯ ಕೆಲಸಗಳನ್ನು ಮಾಡಿ. ಆದಷ್ಟು ಸಂತೋಷವಾಗಿರಲು ಪ್ರಯತ್ನಿಸಿ.
ನಿಮ್ಮ ಅಗತ್ಯಗಳನ್ನು ಗುರುತಿಸಿ – ನಿಮ್ಮ ಅಗತ್ಯಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಪೂರೈಸುವುದು ಮಾನಸಿಕ ಆರೋಗ್ಯಕ್ಕೆ ಮುಖ್ಯವಾಗಿದೆ. ಯಾವುದೇ ರೀತಿಯ ಸಹಾಯ ಬೇಕಾದರೆ ಕೇಳಲು ಹಿಂಜರಿಯಬೇಡಿ.
ಸಂಗಾತಿಯೊಂದಿಗೆ ಚರ್ಚಿಸಿ – ಮಕ್ಕಳಿಗಾಗಿ ಹಂಬಲಿಸುತ್ತಿರುವ ದಂಪತಿಗಳು ಮುಕ್ತವಾಗಿ ಮಾತನಾಡಬೇಕು. ಇದು ಪರಸ್ಪರರ ಆಲೋಚನೆಗಳು ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ. ಬಂಜೆತನದ ಚಿಕಿತ್ಸೆ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಈ ಸಮಸ್ಯೆ ಇರುವವರು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಮಾನಸಿಕವಾಗಿ ಆರೋಗ್ಯಕರವಾಗಿದ್ದಲ್ಲಿ ಮಾತ್ರ ಚಿಕಿತ್ಸೆ ಯಶಸ್ವಿಯಾಗುತ್ತದೆ.