ಮುಂಬೈ: ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ 6.5 ವರ್ಷಗಳ ಬಳಿಕ ಜೈಲಿನಿಂದ ಹೊರಬಂದಿದ್ದಾರೆ.
ಸಿಬಿಐ ನ್ಯಾಯಾಲಯ 2 ಲಕ್ಷ ರೂಪಾಯಿ ನಗದು ಬಾಂಡ್ ಅನ್ನು ಒದಗಿಸುವ ಮೂಲಕ ಬಿಡುಗಡೆ ಮಾಡಲು ಅನುಮತಿ ನೀಡಿದ್ದು, ಶುಕ್ರವಾರ ಬೈಕುಲ್ಲಾ ಜೈಲಿನಿಂದ ಅವರು ಬಿಡುಗಡೆಯಾಗಿದ್ದಾರೆ.
ಏಪ್ರಿಲ್ 2012 ರಲ್ಲಿ ತನ್ನ ಮಗಳು ಶೀನಾ(24) ರನ್ನು ಕೊಲೆ ಮಾಡಿದ ಆರೋಪದ ಮೇಲೆ ಆರು ವರ್ಷಗಳ ನಂತರ ಆಕೆಯನ್ನು ಬಂಧಿಸಲಾಗಿತ್ತು. ಸುಪ್ರೀಂ ಕೋರ್ಟ್ ಬುಧವಾರ ಮುಖರ್ಜಿ(50) ಗೆ ಜಾಮೀನು ನೀಡಿದ್ದು, ಜಾಮೀನು ಷರತ್ತುಗಳನ್ನು ಅಂತಿಮಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತ್ತು.
ಇಂದ್ರಾಣಿ ತನ್ನ ಮಗಳು ಶೀನಾ(24)ಳನ್ನು ಏಪ್ರಿಲ್ 2012 ರಲ್ಲಿ ತನ್ನ ಆಗಿನ ಚಾಲಕ ಶ್ಯಾಮ್ವರ್ ರೈ ಮತ್ತು ಮಾಜಿ ಪತಿ ಸಂಜೀವ್ ಖನ್ನಾ ಸಹಾಯದಿಂದ ಕೊಲೆ ಮಾಡಿದ ಆರೋಪಿಯಾಗಿದ್ದಾಳೆ. ಇಂದ್ರಾಣಿ ಮುಖರ್ಜಿ ದೀರ್ಘಕಾಲದವರೆಗೆ ಜೈಲಿನಲ್ಲಿದ್ದು, ವಿಚಾರಣೆ ಶೀಘ್ರದಲ್ಲೇ ಮುಗಿಯುವ ಸಾಧ್ಯತೆಯಿಲ್ಲ ಎಂದು ಗಮನಿಸಿದ ಸುಪ್ರೀಂ ಕೋರ್ಟ್ ಆಕೆಗೆ ಜಾಮೀನು ನೀಡಿದೆ.