ಇಂದೋರ್: ಮಧ್ಯಪ್ರದೇಶದ ಇಂದೋರ್‌ನ ನೆಹರು ನಗರದ ನಿವಾಸಿ ಮಹಿಳೆಯೊಬ್ಬರು ತನ್ನ ಅತ್ತೆ- ಮಾವಂದಿರ ವಿರುದ್ಧ ವರದಕ್ಷಿಣೆ, ದೈಹಿಕ ಹಿಂಸೆ, ಮಾನಸಿಕ ಕಿರುಕುಳದ ದೂರು ದಾಖಲಿಸಿದ್ದಾರೆ.
ಪತಿಗೆ ಪುರುಷತ್ವ ಇಲ್ಲ ಎಂಬುದು ತಿಳಿದ ಬಳಿಕ ಅತ್ತೆ- ಮಾವ ಈ ರೀತಿ ಮಾಡಲಾರಂಭಿಸಿದರು ಎಂದು ಸಂತ್ರಸ್ತೆ ಮಹಿಳೆ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ವರ್ಷ ಫೆಬ್ರವರಿಯಲ್ಲಿ ವಿವಾಹವಾಗಿದೆ. ಹನಿಮೂನ್‌ಗೆ ಹೋಗಿದ್ದಾಗ ಪತಿಗೆ ಪುರುಷತ್ವ ಇಲ್ಲ ಎಂಬುದು ಗೊತ್ತಾಗಿದೆ. ಮದುವೆಯ ಸಂದರ್ಭದಲ್ಲಿ ನನ್ನ ಮನೆಯವರು 5 ಲಕ್ಷ ರೂಪಾಯಿ ವರದಕ್ಷಿಣೆ ಮತ್ತು ಇತರ ಆಭರಣಗಳನ್ನು ನೀಡಿದ್ದರು. ಹನಿಮೂನ್‌ಗೆ ಹೋದಾಗ ಪತಿ ತನ್ನೊಂದಿಗೆ ದೈಹಿಕ ಸಂಪರ್ಕ ಮಾಡಿಲ್ಲ. ನೆಪ ಹೇಳಿ ತಪ್ಪಿಸುತ್ತಿದ್ದರು. ಇದಾದ ಬಳಿಕ ಊರಿಗೆ ಹಿಂದಿರುಗಿದೆವು. ಪತಿಗೆ ಪುರುಷತ್ವ ಇಲ್ಲ ಎಂಬುದು ನನಗೆ ಗೊತ್ತಾಗಿದೆ ಎಂಬುದು ಅತ್ತೆ- ಮಾವಂದಿರ ಅರಿವಿಗೂ ಬಂತು. ಇಲ್ಲಿಂದಾಚೆಗೆ ಅವರು ವರದಕ್ಷಿಣೆ ಕಿರುಕುಳ ನೀಡಲಾರಂಭಿಸಿದರು. ದೈಹಿಕ ಹಿಂಸೆ ಮತ್ತು ಮಾನಸಿಕ ಕಿರುಕುಳ ನೀಡಲಾರಂಭಿಸಿದರು ಎಂದು ಸಂತ್ರಸ್ತೆ ಮಹಿಳೆ ಆರೋಪಿಸಿದ್ದಾರೆ.
BIG NEWS: ಧಾರವಾಡದಲ್ಲಿ ಮತ್ತೊಂದು ಭೀಕರ ಅಪಘಾತ; ಸೇತುವೆ ಮೇಲಿಂದ ಕೆಳಗೆ ಉರುಳಿದ ಕಾರು
ಸಂತ್ರಸ್ತ ಮಹಿಳೆಯು ಮುಂಬೈ ನಿವಾಸಿಯನ್ನು 2022ರ ಫೆಬ್ರವರಿಯಲ್ಲಿ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಮದುವೆಯಾದರು. ತನ್ನ ಪತಿಗೆ ಪುರುಷತ್ವ ಇಲ್ಲ ಎಂಬುದು ಮಹಿಳೆಗೆ ದೃಢವಾಗಿದೆ. ಆ ವ್ಯಕ್ತಿ ತನ್ನೊಂದಿಗೆ ದೈಹಿಕ ಸಂಬಂಧವನ್ನು ತಪ್ಪಿಸಿದ್ದನ್ನು ಇದಕ್ಕಾಗಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಸಂತ್ರಸ್ತೆ ತನ್ನ ಅತ್ತೆಯ ಮುಂದೆ ಪತಿಯ ವಿಚಾರ ಬಹಿರಂಗಪಡಿಸಿದ ಬಳಿಕ, ಅವರು ಆಕೆಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು. 10 ಲಕ್ಷ ರೂಪಾಯಿ ವರದಕ್ಷಿಣೆ ನೀಡುವಂತೆ ಕೇಳಿದರು. ಆಕೆಯನ್ನು ಮನೆಯಿಂದ ಹೊರಹಾಕಲಾಯಿತು ಎಂದು ಪೊಲೀಸ್ ಅಧಿಕಾರಿ ಮಮತಾ ತ್ರಿಪಾಠಿ ವಿವರಿಸಿದ್ದಾರೆ.
ದೂರಿನ ಮೇರೆಗೆ ಆಕೆಯ ಪತಿ, ಅತ್ತೆ, ಸೊಸೆ ಮತ್ತು ಆಕೆಯ ಪತಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.