ಬೀದಿ ಬದಿ ವ್ಯಾಪಾರಿಗಳ ಗಳಿಕೆ ತುಂಬಾ ಕಡಿಮೆ ಎಂಬ ನಂಬಿಕೆ ಅನೇಕರಿಗಿದೆ. ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಜನರಿಗಿಂತ ಕೆಲ ಬೀದಿ ಬದಿ ವ್ಯಾಪಾರಿಗಳು ನಿಮ್ಮ ಊಹೆಗೆ ಮೀರಿದಷ್ಟು ಸಂಪಾದನೆ ಮಾಡ್ತಿದ್ದಾರೆ. ಭಾರತದಲ್ಲಿ ಬೀದಿ ಬದಿ ವಸ್ತುಗಳು, ಆಹಾರಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ತಳ್ಳುವ ಗಾಡಿಯಲ್ಲಿ ಆಹಾರ ನೀಡುವವರು ಸಾಕಷ್ಟು ಹಣ ಸಂಪಾದನೆ ಮಾಡ್ತಿದ್ದಾರೆ. ಇದಕ್ಕೆ ಇಂದೋರ್ ನಲ್ಲಿ ತಳ್ಳುವ ಗಾಡಿಯಲ್ಲಿ ಅವಲಕ್ಕಿ ಮಾರಾಟ ಮಾಡ್ತಿರುವ ವ್ಯಕ್ತಿ ಉತ್ತಮ ನಿದರ್ಶನ.
ಇನ್‌ಸ್ಟಾಗ್ರಾಮ್‌ನಲ್ಲಿ ಆಪ್ಕಾರ್ತೆಕ್ಯಾಹೋ ಹೆಸರಿನ ಐಡಿಯೊಂದರಲ್ಲಿ ಈತನ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈತ ತನ್ನ ತಿಂಗಳ ಗಳಿಕೆ ಬಗ್ಗೆ ಮಾಹಿತಿ ನೀಡಿದ್ದಾನೆ. ಅದನ್ನು ಕೇಳಿದ ಜನರು ದಂಗಾಗಿದ್ದಾರೆ. ಯಾಕೆಂದ್ರೆ ಈತ ತಿಂಗಳಿಗೆ ಒಂದು ಗಾಡಿಯಿಂದಲೇ 75 ಸಾವಿರ ರೂಪಾಯಿಗಿಂತಲೂ ಹೆಚ್ಚು ಸಂಪಾದನೆ ಮಾಡ್ತಿದ್ದಾನೆ. ಆತನ ಬಳಿ ಅವಲಕ್ಕಿ ( ಪೋಹಾ) ಮಾರಾಟ ಮಾಡುವ 6 ಗಾಡಿಗಳಿವೆ. ಪ್ರತಿ ದಿನ 6 ರಿಂದ 7 ಸಾವಿರ ರೂಪಾಯಿ ಆದಾಯ ಬರುತ್ತದೆ. ಒಂದು ಪ್ಲೇಟ್ ಪೋಹಾ ಬೆಲೆ 30 ರಿಂದ 40 ರೂಪಾಯಿ. ದಿನಕ್ಕೆ ಒಂದು ಗಾಡಿಯಿಂದ ಈತ 2.5 ಸಾವಿರ ರೂಪಾಯಿಗಿಂತ ಹೆಚ್ಚು ಗಳಿಸ್ತಾನೆ. ಆರು ಗಾಡಿ ಲೆಕ್ಕ ಹಾಕಿದ್ರೆ ಪ್ರತಿ ತಿಂಗಳಿಗೆ ಈತ 4.5 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಸಂಪಾದನೆ ಮಾಡ್ತಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಈತನ ವಿಡಿಯೋ ವೈರಲ್ ಆಗಿದೆ. 2 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ನಾನು ವರ್ಷಪೂರ್ತಿ ದುಡಿದ್ರೂ ಇಷ್ಟು ಹಣ ಬರೋದಿಲ್ಲ ಅಂತಾ ಒಬ್ಬ ಬರೆದ್ರೆ ಇನ್ನೊಬ್ಬ ವ್ಯಾಪಾರ ಕಷ್ಟ ಎಂದಿದ್ದಾರೆ.