alex Certify SHOCKING: ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ, ಈ ಬಾರಿ ಪುಟ್ಟ ಮಕ್ಕಳೇ ಡೆಡ್ಲಿ ವೈರಸ್​ನ ಟಾರ್ಗೆಟ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ, ಈ ಬಾರಿ ಪುಟ್ಟ ಮಕ್ಕಳೇ ಡೆಡ್ಲಿ ವೈರಸ್​ನ ಟಾರ್ಗೆಟ್​..!

ಇಂದೋರ್​​ನಲ್ಲಿ ಮತ್ತೆ ಕೊರೊನಾ ವೈರಸ್​ ತೀವ್ರಗತಿಯಲ್ಲಿ ಹಬ್ಬುತ್ತಿದೆ. ಈ ಬಾರಿ ಕೊರೊನಾ ವೈರಸ್​​ ಮಕ್ಕಳ ಮೇಲೂ ಗಾಢ ಪರಿಣಾಮ ಬೀರ್ತಿದೆ . ಕಳೆದ 24 ಗಂಟೆಗಳಲ್ಲಿ ಕೊರೊನಾದ ಹೊಸ 166 ಕೇಸ್​ಗಳು ದಾಖಲಾಗಿವೆ. ಇದರಲ್ಲಿ ಮಕ್ಕಳು ಕೂಡ ಸೇರಿದ್ದಾರೆ. ಹೀಗಾಗಿ ವೈದ್ಯರು ಪೋಷಕರ ಬಳಿ ಮಕ್ಕಳನ್ನ ಎಚ್ಚರವಾಗಿ ನೋಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಇಂದೋರ್​ನಲ್ಲಿ ಕೊರೊನಾ ಕೇಸ್​ಗಳು ಹೆಚ್ಚಾಗುತ್ತಲೇ ಇದೆ.  ಕಳೆದ 22 ಗಂಟೆಯಲ್ಲಿ 2199 ಸ್ವ್ಯಾಬ್​ಗಳನ್ನ ಪರೀಕ್ಷಿಸಲಾಗಿದ್ದು ಇದರಲ್ಲಿ 166 ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ. ಕೊರೊನಾದಿಂದ ಓರ್ವ ರೋಗಿ ಸಾವನ್ನಪ್ಪಿದ್ದಾರೆ.ಇಂದೋರ್​ನಲ್ಲಿ ಯುಕೆಯಿಂದ ಬಂದ 6 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡ ಬಳಿಕ ದಿನದಿಂದ ದಿನಕ್ಕೆ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಈ ಸಂಬಂಧ ಸಲಹೆ ನೀಡಿರುವ ವೈದ್ಯ ಪಿ.ಎಸ್​ ಠಾಕೂರ್​, 2 ವರ್ಷದಿಂದ 18ವರ್ಷದವರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ತಿದೆ. ಅದರಲ್ಲೂ 5 ವರ್ಷದ ಆಸುಪಾಸಿನವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ತಿದೆ. ಹೀಗಾಗಿ ಮಕ್ಕಳನ್ನ ಅನವಶ್ಯಕವಾಗಿ ಮನೆಯಿಂದ ಹೊರಬಿಡಬೇಡಿ. ಅಲ್ಲದೇ ಮಾಸ್ಕ್​ ಹಾಕಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡಿರುವಂತೆ ಮಕ್ಕಳಿಗೆ ಎಚ್ಚರಿಕೆ ನೀಡಿ ಎಂದು ಮಾಹಿತಿ ನೀಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...