ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ನಡೆಸಿದ ಧಾರ್ಮಿಕ ಕ್ರಿಯೆಗಳು ಸರಿಯಾಗಿರಲಿಲ್ಲ ಎಂದು ಪೂಜೆ ಮಾಡಿಸಿದವರು ಹಲ್ಲೆ ನಡೆಸಿದ ಪ್ರಸಂಗ ನಡೆದಿದೆ.
ರಾಜಸ್ಥಾನದ ಕೋಟಾ ನಿವಾಸಿಯಾಗಿರುವ ಅರ್ಚಕ ಕುಂಜ್‌ಬಿಹಾರಿ ಶರ್ಮಾ ಅವರನ್ನು ಕಾರ್ಯಕ್ರಮದ ಅಯೋಜಕರು ಮತ್ತು ಅವರ ಇಬ್ಬರು ಪುತ್ರರು ಗುರುವಾರ ರಾತ್ರಿ ಥಳಿಸಿದ್ದಾರೆ.
ಲಕ್ಷ್ಮಿಕಾಂತ್ ಶರ್ಮಾ ಎಂಬುವರ ಮನೆಯಲ್ಲಿ ಪೂಜೆ ಮಾಡಿಸಲು ಅರ್ಚಕರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮ ಮುಗಿದ ನಂತರ ಅವರು ಮನೆಗೆ ತೆರಳಿದದ್ದರು.
ತಡರಾತ್ರಿ, ಲಕ್ಷ್ಮಿಕಾಂತ್ ಶರ್ಮಾ ಮತ್ತು ಅವರ ಮಗ ವಿಪುಲ್ ಮತ್ತು ಅರುಣ್ 60 ವರ್ಷದ ಅರ್ಚಕರ ಮನೆಗೆ ತೆರಳಿ ಹೊಡೆದಿದ್ದಾರೆ. ಕಿವಿಯನ್ನು ಘಾಸಿ ಮಾಡಿದ್ದಾರೆ.
ತಪ್ಪಾದ ರೀತಿಯಲ್ಲಿ ಪೂಜೆ ಆಚರಣೆಗಳನ್ನು ನಡೆಸಿದ ನಂತರ ಅರುಣ್ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದರು ಎಂದು ಆರೋಪಿಸಲಾಗಿದೆಯೆಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಅರ್ಚಕರನ್ನು ನೆರೆಹೊರೆಯವರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರೆ, ಲಕ್ಷ್ಮೀಕಾಂತ್ ಶರ್ಮಾ ಮತ್ತು ಅವರ ಮಕ್ಕಳಾದ ವಿಪುಲ್ ಮತ್ತು ಅರುಣ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.