alex Certify ಈ ಐಸ್‌ ಕ್ರೀಮ್‍ಗೆ ಶುಂಠಿ-ಬೆಳ್ಳುಳ್ಳಿ ಕೂಡ ಸೇರಿಸಿ ಅಂದ್ರು ನೆಟ್ಟಿಗರು..! ಯಾಕೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಐಸ್‌ ಕ್ರೀಮ್‍ಗೆ ಶುಂಠಿ-ಬೆಳ್ಳುಳ್ಳಿ ಕೂಡ ಸೇರಿಸಿ ಅಂದ್ರು ನೆಟ್ಟಿಗರು..! ಯಾಕೆ ಗೊತ್ತಾ…?

ವಿಶಿಷ್ಠ, ವಿಭಿನ್ನವಾದ ಆಹಾರ ಖಾದ್ಯಗಳ ವಿಡಿಯೋವನ್ನು ಇಂಟರ್ನೆಟ್ ನಲ್ಲಿ ನೀವು ನೋಡಿರುತ್ತೀರಿ. ಇದೀಗ ವೈರಲ್ ಆಗಿರುವ ಹೊಸ ಪಾಕಕ್ಕೆ ನೆಟ್ಟಿಗರು ಅಸಹ್ಯ ವ್ಯಕ್ತಪಡಿಸಿದ್ದಾರೆ.

ಇಂದೋರ್ ನಲ್ಲಿ ಬೀದಿ ಆಹಾರ ವ್ಯಾಪಾರಿಯೊಬ್ಬರು ಮಿರ್ಚಿ ಐಸ್‌ಕ್ರೀಮ್ ರೋಲ್ ಮಾಡುವ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಇದು 76 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.

ಸಾಮಾನ್ಯವಾಗಿ ನೀವು, ಗಡ್ ಬಡ್ ಐಸ್‌ಕ್ರೀಮ್, ದಿಲ್ ಕುಷ್, ಐ ಪಿಜ್ಜಾ, ಪಾನ್ ಐಸ್ ಕ್ರೀಂ ಇಂಥವುಗಳನ್ನು ತಿಂದಿರುತ್ತೀರಾ….. ಐಸ್‌ಕ್ರೀಮ್ ಕೇವಲ ತಣ್ಣಗೆ ಮಾತ್ರವಲ್ಲ ಸಿಹಿಯಾಗಿ, ರುಚಿಯಾಗಿಯೂ ಇರುತ್ತದೆ. ಆದರೆ, ಎಂದಾದ್ರೂ ನೀವು ಮಿರ್ಚಿ ಐಸ್ ಕ್ರೀಂ ತಿಂದಿದ್ದೀರಾ..? ಇಂದೋರ್ ನ ವ್ಯಾಪಾರಿಯೊಬ್ಬರು ತಮ್ಮ ಸ್ಟಾಲ್ ನಲ್ಲಿ  ಮೆಣಸಿನಕಾಯಿ ಹಾಗೂ ಇತರೆ ಪದಾರ್ಥಗಳನ್ನು ಸೇರಿಸಿ ಐಸ್‌ಕ್ರೀಮ್ ತಯಾರಿಸಿದ್ದಾರೆ.

ಮೊದಲಿಗೆ ಮೆಣಸಿನಕಾಯಿಯನ್ನು ಸಮತಟ್ಟಾದ ಮೇಲ್ಮೈಯಲ್ಲಿ ಸಣ್ಣ ತುಂಡುಗಳಾಗಿ ಕತ್ತರಿಸಲಾಗಿದೆ. ಅದರ ನಂತರ ಮೆಣಸಿನಕಾಯಿಗೆ ನುಟೆಲ್ಲಾ – ಚಾಕೊಲೇಟ್ ಸ್ಪ್ರೆಡ್ ಅನ್ನು ಸೇರಿಸಿದ್ದಾರೆ. ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ, ಐಸ್ಕ್ರೀಂ ರೋಲ್ ಗಳಾಗಿ ಕತ್ತರಿಸಿದ್ದಾರೆ.

ಇದನ್ನು ಮೆಣಸಿನಕಾಯಿಗಳಿಂದಲೇ ಅಲಂಕರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಇಷ್ಟಪಟ್ಟಂತೆ ಕಂಡು ಬಂದಿಲ್ಲ. ಕೇವಲ ಮೆಣಸಿನಕಾಯಿ ಮಾತ್ರ ಏಕೆ, ಶುಂಠಿ ಬೆಳ್ಳುಳ್ಳಿ ಕೂಡ ಸೇರಿಸಿ ಅಂತಾ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...