ಇಂದೋರ್: ಸಾರ್ವಜನಿಕ ಶೌಚಾಲಯದಲ್ಲಿ ಮೊಟ್ಟೆ, ಮಾಂಸ ಮಾರಾಟವಾಗುತ್ತಿರುವುದು ಕಂಡುಬಂದಿದ್ದು, ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಇಂದೋರ್ ನ ಲೋಹಾ ಮಂಡಿಯಲ್ಲಿರುವ ಸುಲಭ್ ಇಂಟರ್ ನ್ಯಾಷನಲ್ ಎನ್.ಜಿ.ಒ. ನಡೆಸುತ್ತಿರುವ ಸಾರ್ವಜನಿಕ ಶೌಚಾಲಯದಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ. ಸಾರ್ವಜನಿಕ ಶೌಚಾಲಯದಲ್ಲಿ ಮೊಟ್ಟೆ ಮತ್ತು ಮಾರಾಟ ಮಾಡುತ್ತಿರುವುದನ್ನು ಪರಿಶೀಲಿಸಿದ ಬಳಿಕ ಕ್ರಮಕೈಗೊಳ್ಳಲಾಗಿದೆ. 1000 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಿಂದೋರ್ ಮುನ್ಸಿಪಲ್ ಕಾರ್ಪೋರೇಷನ್ ಹೆಚ್ಚುವರಿ ಆಯುಕ್ತ ಅಭಯ್ ರಾಜನ್ ಗಾವಂಕರ್ ಹೇಳಿದ್ದಾರೆ.
ಸುಲಭ್ ಇಂಟರ್ ನ್ಯಾಷನಲ್ ಸಂಸ್ಥೆಗೆ ನೋಟಿಸ್ ನೀಡಿ 20 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಅವರು ಹೇಳಿದ್ದಾರೆ. 2017 ರಿಂದ ಸತತ ನಾಲ್ಕು ವರ್ಷಗಳ ಕಾಲ ದೇಶದ ಸ್ವಚ್ಛ ನಗರವೆಂದು ಕೇಂದ್ರ ಸರ್ಕಾರದಿಂದ ಇಂದೋರ್ ಗೆ ಪ್ರಶಸ್ತಿ ನೀಡಲಾಗಿದೆ.