ತಂತ್ರಜ್ಞಾನ ಮತ್ತು ವೇದ ಗಣಿತದಲ್ಲಿನ ಶ್ರೇಷ್ಠತೆಗಾಗಿ ಇಂದೋರ್‌ನ 12 ವರ್ಷದ ಬಾಲಕ ಅವಿ ಶರ್ಮಾ ಅವರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2022 ನೀಡಲಾಗಿದೆ. ಈ ಪುರಸ್ಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಗರಿಕರಿಗೆ ಅತ್ಯುನ್ನತ ಪ್ರಶಸ್ತಿಯಾಗಿದೆ.
ಬಾಲ ಮುಖಿ ರಾಮಾಯಣ ಎಂಬ ಹೆಸರಿನಲ್ಲಿ ರಾಮಾಯಣದ 250-ಪದ್ಯಗಳ ಸಂಕ್ಷೇಪಿತ ಆವೃತ್ತಿಯ ರಚಿಸಿರುವ ಅವಿ, ಮೊಟಿವೇಷನಲ್ ಸ್ಪೀಕರ್ ಮತ್ತು ಸಂಯೋಜಕರು ಹೌದು. ಅಷ್ಟೇ ಅಲ್ಲಾ ಅವಿ ಶರ್ಮಾ ಅವರು ಧ್ವನಿ ಕಮಾಂಡ್ ಸಿಸ್ಟಮ್ ಅನ್ನು ಸಹ ನಿರ್ಮಿಸಿದ್ದಾರೆ. MADHAV (My Advanced Domestic Handling Ai Version) ಎಂಬ ಧ್ವನಿ ಕಮಾಂಡ್ ಸಾಫ್ಟ್‌ವೇರ್ ಮೂಲಕ ಲ್ಯಾಪ್‌ಟಾಪ್ ನಿರ್ವಹಣೆಯಾಗುತ್ತದೆ.
ಅವಿಯನ್ನು ಅಭಿನಂದಿಸಿರುವ ಪ್ರಧಾನಿ ಮೋದಿ, 12 ನೇ ವಯಸ್ಸಿನಲ್ಲಿ, ಅವಿ ಶರ್ಮಾ ಅವರು ಮೋಟಿವೇಷನಲ್ ಸ್ಪೀಕರ್ ಆಗಿದ್ದಾರೆ. ಬಾಲ್ ಮುಖಿ ರಾಮಾಯಣ ಎಂಬ ರಾಮಾಯಣದ ಸಂಕ್ಷಿಪ್ತ ಆವೃತ್ತಿಯನ್ನು ಸಹ ರಚಿಸಿದ್ದಾರೆ. ರಾಷ್ಟ್ರೀಯ ಬಾಲ ಪುರಸ್ಕಾರ ಗೆದ್ದಿದ್ದಕ್ಕಾಗಿ ಅವಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ
ಎಎನ್‌ಐ ಜೊತೆ ಮಾತನಾಡಿದ ಅವಿ, ಪ್ರಧಾನಿ ಮೋದಿಯವರೊಂದಿಗೆ ಮಾತನಾಡುವಾಗ ನನಗೆ ಹೆಮ್ಮೆಯಾಯಿತು. ಪ್ರಧಾನಿ ಅವರು ನನ್ನೊಂದಿಗೆ ಬಹಳ ಸಮಯ ಮಾತನಾಡಿದ್ದಾರೆ ಮತ್ತು ಉಮಾಭಾರತಿ ಅವರ ಉಪಾಖ್ಯಾನವನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
2020 ರಲ್ಲಿ ರಾಮಾಯಣವನ್ನು ಬರೆದಿರುವ ಅವಿ 2021 ರಲ್ಲಿ ಉಚಿತವಾಗಿ ವೇದ ಗಣಿತ ಮತ್ತು ಕೋಡಿಂಗ್ ಅನ್ನು ಆನ್‌ಲೈನ್‌ನಲ್ಲಿ ಕಲಿಸಿದರು. ಅವಿ ನಮ್ಮ ಹೆಮ್ಮೆ ಎಂದು ಆತನ ತಾಯಿ ವಿನಿತಾ ಶರ್ಮಾ ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತ ಸರ್ಕಾರವು, ಅಸಾಧಾರಣ ಸಾಮರ್ಥ್ಯಗಳು ಮತ್ತು ನಾವೀನ್ಯತೆ, ಪಾಂಡಿತ್ಯಪೂರ್ಣ ಸಾಧನೆಗಳು, ಕ್ರೀಡೆ, ಕಲೆ ಮತ್ತು ಸಂಸ್ಕೃತಿ, ಸಮಾಜ ಸೇವೆ ಮತ್ತು ಶೌರ್ಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ನೀಡಿ ಗೌರವಿಸುತ್ತದೆ.