ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಮದುವೆಯ ಮೆರವಣಿಗೆಯೊಂದು ಅಂತರ್ಜಾಲದಲ್ಲಿ ಕಿಚ್ಚು ಹಚ್ಚಿದೆ. ವರನ ಮೆರವಣಿಗೆಯಲ್ಲಿ ದೀಪಗಳನ್ನು ಹೇಗೆ ಸೊಗಸಾಗಿ ಪ್ರದರ್ಶಿಸಲಾಗುತ್ತದೆಯೋ ಹಾಗೆಯೇ, ಬಾರಾತಿಗಳು ಮಾರ್ಗದ ಉದ್ದಕ್ಕೂ ಕೂಲರ್‌ಗಳನ್ನು ಅಳವಡಿಸುವ ಮೂಲಕ ಬಿಸಿಲಿನ ಧಗೆಯನ್ನು ಸೋಲಿಸಲು ನಿರ್ಧರಿಸಿರುವ ವಿಡಿಯೋ ಇದಾಗಿದೆ.
ಕೂಲರ್‌ಗಳನ್ನು ಟ್ರಾಲಿಯಲ್ಲಿ ಸಾಗಿಸುವ ಜನರೇಟರ್‌ಗಳಿಗೆ ಚತುರತೆಯಿಂದ ಜೋಡಿಸಲಾಗಿತ್ತು, ಇದು ಅತಿಥಿಗಳು ಮತ್ತು ಬಾರಾತಿಗಳಿಗೆ ತಂಪಾದ ಗಾಳಿಯನ್ನು ಪಸರಿಸುತ್ತಿತ್ತು. ಈ ಮೂಲಕ ದೇಸಿ ಜುಗಾಡ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಟ್ವಿಟ್ಟರ್ ಬಳಕೆದಾರ ಅನುರಾಗ್ ದ್ವಾರಿ ಪೋಸ್ಟ್ ಮಾಡಿದ, ಈಗ ವೈರಲ್ ವೀಡಿಯೊ ನೋಡಿ ಜನರು ಖುಷಿ ಪಡುತ್ತಿದ್ದಾರೆ. “ಬೇಸಿಗೆಯಲ್ಲಿ ಬಾರಾತಿಗಳನ್ನು ತಂಪಾಗಿರಿಸಲು ಮತ್ತು ಪಂಪ್ ಅಪ್ ಮಾಡಲು, ಇಂದೋರ್‌ನಲ್ಲಿ 400 ಬಾರಾತಿಗಳಿಗೆ 1.5 ಕಿಮೀ ಮಾರ್ಗದಲ್ಲಿ ಕೂಲರ್‌ಗಳನ್ನು ಸ್ಥಾಪಿಸಲಾಗಿತ್ತು ಎಂದು ಅವರು ಬರೆದುಕೊಂಡಿದ್ದಾರೆ. ಈ ಅದ್ಭುತ ಕಲ್ಪನೆಯನ್ನು ಶ್ಲಾಘಿಸಲು ಪದಗಳೇ ಸಾಲದು ಎಂದು ಹಲವರು ನೆಟ್ಟಿಗರು ಹೇಳುತ್ತಿದ್ದಾರೆ.