ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ರೈಲಿನಲ್ಲಿ ಮಹಿಳೆಯ ದೇಹವನ್ನು ಕತ್ತರಿಸಿ ತುಂಬಿದ ಎರಡು ಚೀಲಗಳು ಪತ್ತೆಯಾಗಿವೆ.
ಇಂದೋರ್ ನಗರದಲ್ಲಿ ಅಪರಿಚಿತ ಮಹಿಳೆಯ ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿದ್ದು, ಕೈ ಮತ್ತು ಕಾಲುಗಳು ಕಾಣೆಯಾಗಿವೆ. ರೈಲಿನಲ್ಲಿದ್ದ ಎರಡು ಚೀಲಗಳನ್ನು ಜಿಆರ್‌ಪಿ ವಶಪಡಿಸಿಕೊಂಡಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಮಹಿಳೆಯನ್ನು ಬೇರೆ ಕಡೆ ಕೊಲೆ ಮಾಡಿ ಶವವನ್ನು ಶನಿವಾರ ರಾತ್ರಿ ರೈಲಿಗೆ ಎಸೆದಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಸ್ವಚ್ಛತಾ ಸಿಬ್ಬಂದಿ ಚೀಲಗಳನ್ನು ಗುರುತಿಸಿ ಶವದ ಬಗ್ಗೆ ಪ್ರಾಧಿಕಾರಕ್ಕೆ ತಿಳಿಸಿದರು. ಅಂಬೇಡ್ಕರ್ ನಗರ-ಇಂದೋರ್ ಪ್ಯಾಸೆಂಜರ್ ರೈಲಿನಿಂದ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಗುರುತು ಪತ್ತೆಯಾಗದ ಮೃತರು 20 ರಿಂದ 25 ವರ್ಷ ವಯಸ್ಸಿನವರು ಎಂದು ಸರ್ಕಾರಿ ರೈಲ್ವೆ ಪೊಲೀಸ್(ಜಿಆರ್‌ಪಿ) ಸ್ಟೇಷನ್ ಇನ್‌ಚಾರ್ಜ್ ಸಂಜಯ್ ಶುಕ್ಲಾ ತಿಳಿಸಿದ್ದಾರೆ.
ಮಹಿಳೆಯ ದೇಹದ ತಲೆಯಿಂದ ಸೊಂಟದವರೆಗಿನ ಭಾಗವು ರೈಲಿನಲ್ಲಿ ಬಿಟ್ಟ ಟ್ರಾಲಿ ಬ್ಯಾಗ್‌ನಲ್ಲಿ ಪತ್ತೆಯಾಗಿದೆ. ಆದರೆ ಸೊಂಟದ ಕೆಳಗಿನ ದೇಹದ ಭಾಗವು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿದೆ. ಆಕೆಯ ಎರಡೂ ಕೈಗಳು ಮತ್ತು ಕಾಲುಗಳು ಕಾಣೆಯಾಗಿವೆ. ಅಂಬೇಡ್ಕರ್ ನಗರ-ಇಂದೋರ್ ರೈಲು ಶನಿವಾರ ರಾತ್ರಿ ಇಲ್ಲಿಗೆ ತಲುಪಿತು. ಪ್ರಯಾಣಿಕರು ಇಳಿದ ನಂತರ ರೈಲನ್ನು ನಿರ್ವಹಣೆಗಾಗಿ ಯಾರ್ಡ್‌ಗೆ ಸ್ಥಳಾಂತರಿಸಲಾಯಿತು. ಮೃತ ಮಹಿಳೆಯನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.