ಕೋವಿಡ್ 19 ವಿಶ್ವಕ್ಕೆ ಭಾದಿಸಿದಾಗಿನಿಂದ ದಿನನಿತ್ಯದ ಜೀವನ ಸಂಪೂರ್ಣ ಬದಲಾಗಿ ಹೋಗಿದೆ. ಕೆಲಸ ಮಾಡುವ ವೈಖರಿ, ಮದುವೆ ಕಾರ್ಯಕ್ರಮಗಳು ಸಂಪೂರ್ಣ ಬದಲಾಗಿವೆ.
ಭಾರತದಲ್ಲಿ ಮದುವೆ ಕಾರ್ಯಕ್ರಮ ಅಂದರೆ ಸಾಕು ಧೂಮ್ ಧಾಮ್ ಎಂದು ಆಚರಿಸಲಾಗುತ್ತೆ. ಆದರೆ ಕೊರೊನಾದಿಂದಾಗಿ ಇದೀಗ ಸಿಂಪಲ್ ಆಗಿಯೇ ಮದುವೆ ಕಾರ್ಯಕ್ರಮಗಳು ನಡೆಯುತ್ತಿದೆ. ಆತ್ಮೀಯರ ಮದುವೆಗೆ ತೆರಳಿ ಏನಾದರೂ ಉಡುಗೊರೆ ನೀಡೋಣ ಅಂದರೆ ಕೆಲವು ಕಡೆ ಸರಿಯಾಗಿ ಅಂಗಡಿಗಳು ಸಹ ಓಪನ್ ಇರೋದಿಲ್ಲ. ಈಗಿನ ಕ್ವಾರಂಟೈನ್ ಲೈಫ್ಸ್ಟೈಲ್ಗೆ ಹೋಲಿಕೆಯಾಗುವಂತಹ ಕೆಲ ಬೆಸ್ಟ್ ಗಿಫ್ಟ್ಗಳ ವಿವರ ಇಲ್ಲಿದೆ ನೋಡಿ.
ಇನ್ಡೋರ್ ಗಿಡಗಳು : ಕೊರೊನಾದಿಂದಾಗಿ ಎಲ್ಲರೂ ಮನೆಯಲ್ಲಿಯೇ ಇರ್ತಾರೆ. ಶುದ್ಧ ಗಾಳಿಯನ್ನ ಸೇವನೆ ಮಾಡೋದು ಈ ಸಮಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಅವಶ್ಯಕವಾಗಿದೆ. ಹೀಗಾಗಿ ಬುಕ್ಕೆಗಳ ಬದಲಾಗಿ ನೀವು ಮನೆಯೊಳಗೆ ಬೆಳೆಯುವಂತಹ ಪುಟ್ಟ ಗಿಡಗಳನ್ನ ಉಡುಗೊರೆ ರೂಪದಲ್ಲಿ ನೀಡಬಹುದು. ಪುಷ್ಪಗುಚ್ಚಗಳು ಸುಮ್ಮನೆ ಕಸದ ಬುಟ್ಟಿಗೆ ಸೇರುತ್ತವೆ. ಆದರೆ ಈ ಸಸಿಗಳು ಉತ್ತಮ ಗಾಳಿಯನ್ನ ನೀಡಬಲ್ಲವು.
ಟೀ ಗಿಫ್ಟ್ ಸೆಟ್ : ಸಾಕಷ್ಟು ಆನ್ಲೈನ್ ಸೈಟ್ಗಳಲ್ಲಿ ನಿಮಗೆ ಈ ಗಿಫ್ಟ್ಗಳು ಖರೀದಿ ಮಾಡೋಕೆ ಸಿಗುತ್ತವೆ. ಇದರಲ್ಲಿ ಆಕರ್ಷಕ ಟೀ ಕಪ್ಗಳ ಜೊತೆ ವಿವಿಧ ಫ್ಲೇವರ್ನ ಟೀ ಪುಡಿಗಳು ಇರುತ್ತವೆ. ಮನೆಯಲ್ಲಿ ಇರೋದ್ರಿಂದ ಚಹ ಸೇವನೆ ಮಾಡೋದು ಅನೇಕರಿಗೆ ರೂಢಿ ಆಗೋಗಿದೆ. ಹೀಗಾಗಿ ಹರ್ಬಲ್ ಟೀಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲವು.
ಸುಗಂಧಬರಿತ ಮೇಣದ ಬತ್ತಿಗಳು : ನವ ಜೋಡಿಗಳಿಗೆ ಮೊದಲಿನಂತೆಲ್ಲ ಹನಿಮೂನ್ಗೆ ಹೋಗೋಕೆ ಆಗೋದಿಲ್ಲ. ಇಂತಹ ಸಂದರ್ಭದಲ್ಲಿ ನೀವು ಸುಗಂಧಭರಿತ ಕ್ಯಾಂಡಲ್ಗಳನ್ನ ಉಡುಗೊರೆಯಾಗಿ ನೀಡಿದಲ್ಲಿ ನವಜೋಡಿ ಮನೆಯಲ್ಲಿಯೇ ಕ್ಯಾಂಡಲ್ಲೈಟ್ ಡಿನ್ನರ್ ಮಾಡಬಹುದಾಗಿದೆ.