ಕೆಲವೊಮ್ಮೆ ಜೀವನದಲ್ಲಿ ನಂಬಲು ಅಸಾಧ್ಯ ಎನಿಸುವ ಘಟನೆಗಳು ನಡೆಯುತ್ತವೆ, 22 ಅಡಿ ಉದ್ದದ ಬೃಹತ್ ಹೆಬ್ಬಾವೊಂದು ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಜೀವಂತ ನುಂಗಿದೆ.
ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದೆ. ಸುಮಾರು 22 ಅಡಿ ಉದ್ದದ ಹೆಬ್ಬಾವು 54 ವರ್ಷದ ಮಹಿಳೆಯನ್ನು ನುಂಗಿದೆ. ಬಳಿಕ ಅ ಮಹಿಳೆಯ ದೇಹವನ್ನು ಹೊರ ತೆಗೆಯಲಾಗಿದೆ.
ಪೊಲೀಸರ ಪ್ರಕಾರ, ಮಹಿಳೆಯ ಹೆಸರು ಜಹ್ರಾಹ್. ಜಂಬಿ ಪ್ರದೇಶದ ತೋಟದಿಂದ ರಬ್ಬರ್ ಸಂಗ್ರಹಿಸಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಸೇರಿಕೊಂಡು ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಹೆಬ್ಬಾವೊಂದು ಅಂಗಾತಲಾಗಿ ಮಲಗಿದ್ದನ್ನು ಕಂಡು ಶಾಕ್ ಆಗಿದ್ದಾರೆ.
ಕೊನೆಗೆ ಆಕೆಯ ಪತಿ ಅರಣ್ಯಾಧಿಕಾರಿಗೆ ಮಾಹಿತಿ ನೀಡಿದಾಗ ಹೆಬ್ಬಾವು ಮನುಷ್ಯರನ್ನು ನುಂಗಿರುವುದು ತಿಳಿದಿದೆ. ಅದಕ್ಕೆ ಕಾರಣ, ಮಹಿಳೆಯ ಚಪ್ಪಲಿ, ತಲೆ ಸ್ಕಾರ್ಫ್, ಜಾಕೆಟ್ ಮತ್ತು ಚಾಕು ಹಾವಿನ ಸಮೀಪ ಸಿಕ್ಕಿತ್ತು.
ಓರ್ವ ಸ್ವಯಂಸೇವಕ ಹೆಬ್ಬಾವಿನ ತಲೆಯನ್ನು ಕೊಂಬೆಯೊಂದಿಗೆ ಹಿಡಿದಿದ್ದು, ನಂತರ ಇತರರು ಹಾವನ್ನು ಕತ್ತರಿಸಿ ಮಹಿಳೆಯ ದೇಹವನ್ನು ಹೊರಕ್ಕೆ ತೆಗೆದಿದ್ದಾರೆ.