ಮಹಿಳೆಯೊಬ್ಬಳ ವಿಚಿತ್ರ ಹೇಳಿಕೆ ಎಲ್ಲರನ್ನು ಅಚ್ಚರಿಗೊಳಿಸಿದೆ. ಗಾಳಿ ಮೂಲಕ ಗರ್ಭಿಣಿಯಾಗಿರುವುದಾಗಿ ಮಹಿಳೆ ಹೇಳಿದ್ದಾಳೆ. ಸ್ಥಳೀಯ ಸುದ್ದಿ ಚಾನೆಲ್ನೊಂದಿಗೆ ಮಾತನಾಡಿದ ಮಹಿಳೆ ಯಾವುದೇ ಪುರುಷನೊಂದಿಗೆ ದೈಹಿಕ ಸಂಬಂಧವನ್ನು ಹೊಂದಿರಲಿಲ್ಲ. ಇದ್ದಕ್ಕಿದ್ದಂತೆ ಗಾಳಿ ಬಂದಿದ್ದು, ಗರ್ಭಿಣಿಯಾಗಿದ್ದೇನೆ ಎಂದಿದ್ದಾಳೆ. ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ಮಧ್ಯಾಹ್ನದ ಪ್ರಾರ್ಥನೆ ನಂತ್ರ ಮಹಿಳೆ ತನ್ನ ಕೋಣೆಗೆ ಹೋಗಿದ್ದಳಂತೆ. ಇದ್ದಕ್ಕಿದ್ದಂತೆ ಗಾಳಿ ಆಕೆ ದೇಹವನ್ನು ಪ್ರವೇಶಿಸಿದೆ. ಘಟನೆಯ 15 ನಿಮಿಷಗಳ ನಂತರ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೊಟ್ಟೆ ದೊಡ್ಡದಾಗಲು ಶುರುವಾಗಿದೆ ಎಂದು ಮಹಿಳೆ ಹೇಳಿದ್ದಾಳೆ. ನಂತ್ರ ಸ್ಥಳೀಯ ಆಸ್ಪತ್ರೆಗೆ ಹೋದೆ. ಅಲ್ಲಿ ಹೆರಿಗೆ ಮಾಡಿಸಲಾಗಿದ್ದು, ಹೆಣ್ಣು ಮಗು ಜನಿಸಿದೆ ಎಂದು ಮಹಿಳೆ ದಂಗಾಗಿಸುವ ಹೇಳಿಕೆ ನೀಡಿದ್ದಾಳೆ.
ಮಹಿಳೆಯ ವಿಲಕ್ಷಣ ಕಥೆ ವೈರಲ್ ಆಗಿದೆ. ಸ್ಥಳೀಯ ಸಮುದಾಯ ಚಿಕಿತ್ಸಾಲಯದ ಮುಖ್ಯಸ್ಥರು ಈ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಮಹಿಳೆಗೆ ಮದುವೆಯಾಗಿದ್ದು ಗಂಡನಿಂದ ಬೇರೆಯಿದ್ದಾಳೆ. ಆಕೆಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ. ಇದು ರಹಸ್ಯ ಗರ್ಭಧಾರಣೆಯಂತೆ ತೋರುತ್ತದೆ. ಇದರಲ್ಲಿ ಹೆರಿಗೆಯ ಮೊದಲು ಮಹಿಳೆಗೆ ಗರ್ಭಧಾರಣೆಯ ಅನುಭವವಾಗುವುದಿಲ್ಲವೆಂದು ವೈದ್ಯರು ಹೇಳಿದ್ದಾರೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಗು ಎರಡುವರೆ ಕೆ.ಜಿ. ಇದೆ ಎಂದು ಅವರು ಹೇಳಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡಿದ್ದಾರೆ.