ಕೋವಿಡ್-19 ಸಾಂಕ್ರಾಮಿಕ ರೋಗ ಕಾಲಿಟ್ಟ ನಂತರ ಇಡೀ ವಿಶ್ವವೇ ಮಾಸ್ಕ್ ಧರಿಸುತ್ತಿದೆ. ಮನೆಯಿಂದ ಹೊರ ಹೋಗಬೇಕಾದರೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಇಂಡೋನೇಷ್ಯಾದ ಪಾರ್ಕಿಂಗ್ ಅಟೆಂಡೆಂಟ್ ಒಬ್ಬರು ವಿಸಿಲ್ ಹಾಕುವುದಕ್ಕಾಗಿ ಪದೇ ಪದೇ ಮಾಸ್ಕ್ ತೆಗೆದು ಹಾಕುವುದಕ್ಕೆ ಬೇಸತ್ತು ಹೊಸ ಉಪಾಯ ಹೂಡಿದರು. ಇದರಿಂದ ಅವರು ಶಿಕ್ಷೆಯನ್ನೂ ಅನುಭವಿಸಬೇಕಾಗಿ ಬಂತು.
ಹೌದು, ಇಂಡೋನೇಷ್ಯಾದ ಬಾಲಿಯಲ್ಲಿ ನೆಂಗಾ ಬುಡಿಯಾಸ ಎಂಬ ಪಾರ್ಕಿಂಗ್ ಅಂಟೆಂಡೆಂಟ್, ವಿಸಿಲ್ ಹಾಕುವುದಕ್ಕಾಗಿ ಪದೇ ಪದೇ ಮಾಸ್ಕ್ ತೆಗೆದು ಹಾಕಬೇಕಾಗಿತ್ತು. ಇದರಿಂದ ಬೇಸತ್ತ ಅವರು ಹೊಸ ಉಪಾಯ ಹೂಡಿದ್ರು. ತೆಂಗಿನ ಚಿಪ್ಪಿನಿಂದ ತಾವೇ ಮುಖಗವಸುವನ್ನು ಆವಿಷ್ಕಾರ ಮಾಡಿದ್ದಾರೆ. ಮಧ್ಯದಲ್ಲಿ ಒಂದು ಚಿಕ್ಕ ತೂತು ಮಾಡಿ ಅದರಲ್ಲಿ ವಿಸಿಲ್ ಇಟ್ಟಿದ್ದಾರೆ.
ವಿಚಿತ್ರ ಮೀನು ನೋಡಿ ದಂಗಾದ ನಾವಿಕರು….!
ಇದರಿಂದ ಪದೇ ಪದೇ ಮಾಸ್ಕ್ ತೆಗೆಯುವುದು ತಪ್ಪಿದೆ. ಈ ವಿಡಿಯೋ ಆನ್ ಲೈನ್ ನಲ್ಲಿ ಬಹಳ ಬೇಗ ವೈರಲ್ ಆಗಿದೆ. ಆದರೆ, ಪೊಲೀಸ್ ಅಧಿಕಾರಿಗಳು ಮಾತ್ರ ನೆಂಗಾ ಬುಡಿಯಾಸ ಜಾಣ್ಮೆಗೆ ಪ್ರಭಾವಿತರಾಗದೆ ಶಿಕ್ಷೆ ವಿಧಿಸಿದ್ದಾರೆ. ಅಸಮರ್ಪಕ ಮಾಸ್ಕ್ ಧರಿಸಿದ್ದಕ್ಕೆ ದಂಡ ವಿಧಿಸುವ ಬದಲು ಸ್ಥಳದಲ್ಲೇ ಪುಶ್-ಅಪ್ ಮಾಡಿಸುವ ಮುಖಾಂತರ ಅವರಿಗೆ ಶಿಕ್ಷೆ ವಿಧಿಸಿದ್ದಾರೆ.
https://www.youtube.com/watch?v=1TECQayinDU&feature=emb_logo