ಜಕಾರ್ತ: ಅಡುಗೆ ಎಣ್ಣೆ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ದೇಶೀಯ ಅಡುಗೆ ತೈಲ ಪೂರೈಕೆ ಪರಿಸ್ಥಿತಿಯಲ್ಲಿ ಸುಧಾರಣೆಗಳನ್ನು ಅನುಸರಿಸಿ ತಾಳೆ ಎಣ್ಣೆ ರಫ್ತು ನಿಷೇಧವನ್ನು ಮೇ 23 ರಿಂದ ತೆಗೆದುಹಾಕುವುದಾಗಿ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಗುರುವಾರ ಪ್ರಕಟಿಸಿದ್ದಾರೆ.
ತಾಳೆ ಎಣ್ಣೆ ಉದ್ಯಮದಲ್ಲಿ 17 ಮಿಲಿಯನ್ ಕಾರ್ಮಿಕರ ಕಲ್ಯಾಣವನ್ನು ಸರ್ಕಾರ ಪರಿಗಣಿಸಿ ನಿಷೇಧವನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. .
ವಿಶ್ವದ ಅಗ್ರ ಪಾಮ್ ಆಯಿಲ್ ರಫ್ತುದಾರ ಇಂಡೋನೇಷ್ಯಾ ಏಪ್ರಿಲ್ 28 ರಂದು ಕಚ್ಚಾ ತಾಳೆ ಎಣ್ಣೆ ಮತ್ತು ಅದರ ಕೆಲವು ಉತ್ಪನ್ನಗಳ ಸಾಗಣೆಯನ್ನು ನಿಲ್ಲಿಸಿತ್ತು, ಈ ಬೆಳವಣಿಗೆ ದೇಶೀಯ ಅಡುಗೆ ಎಣ್ಣೆಯ ಗಗನಕ್ಕೇರುತ್ತಿರುವ ಬೆಲೆಗಳನ್ನು ನಿಯಂತ್ರಿಸಲು, ಜಾಗತಿಕ ಸಸ್ಯಜನ್ಯ ಎಣ್ಣೆ ಮಾರುಕಟ್ಟೆಗಳನ್ನು ದಂಗುಬಡಿಸಿತ್ತು.
ದೇಶೀಯ ಅಡುಗೆ ತೈಲ ಪೂರೈಕೆ ಪರಿಸ್ಥಿತಿ ಸುಧಾರಿಸಿರುವುದರಿಂದ ಇಂಡೋನೇಷ್ಯಾ ಮೇ 23 ರಿಂದ ತಾಳೆ ಎಣ್ಣೆ ರಫ್ತು ನಿಷೇಧವನ್ನು ತೆಗೆದುಹಾಕಿದೆ. ಸೋಮವಾರದಿಂದ ರಫ್ತು ನಿಷೇಧ ಹಿಂತೆಗೆದುಕೊಳ್ಳುವುದರಿಂದ ಭಾರತಕ್ಕೆ ತಾಳೆ ಎಣ್ಣೆ ಪ್ರಮಾಣ ಪೂರೈಕೆಯಲ್ಲಿ ಏರಿಕೆಯಾಗಲಿದ್ದು, ದೇಶೀಯ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.