ದೀರ್ಘ ಸಮಯದವರೆಗೆ ಶಬ್ಧ ಮಾಲಿನ್ಯವಾಗ್ತಿದ್ದರೆ ಮನಸ್ಸಿನ ನೆಮ್ಮದಿ ಕಳೆದುಕೊಳ್ಳುವುದು ಸಹಜ. ಕಿರಿಕಿರಿ, ಖಿನ್ನತೆ ಶುರುವಾಗುತ್ತದೆ. ಕೆಲವೊಮ್ಮೆ ಧ್ವನಿವರ್ಧಕದಿಂದ ಬರುವ ದೊಡ್ಡ ಶಬ್ಧ ಸಾಕಷ್ಟು ಸಮಸ್ಯೆ ಹುಟ್ಟುಹಾಕುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಇಂಡೋನೇಷ್ಯಾದ ಮಸೀದಿಗಳು ಮಹತ್ವದ ನಿರ್ಧಾರ ಕೈಗೊಂಡಿವೆ.
ಇಂಡೋನೇಷ್ಯಾದಲ್ಲಿ 21 ಕೋಟಿ ಮುಸ್ಲಿಂ ಜನಸಂಖ್ಯೆ ಇದೆ. ಜನರ ಕುಂದುಕೊರತೆಗಳನ್ನು ಗಮನದಲ್ಲಿಟ್ಟುಕೊಂಡು, ಈ ದೇಶವು ಮಸೀದಿಯ ಧ್ವನಿವರ್ಧಕಗಳ ಸೌಂಡ್ ಕಡಿಮೆ ಮಾಡಿದೆ. ಇಂಡೋನೇಷ್ಯಾ ಮಸೀದಿ ಕೌನ್ಸಿಲ್ ಪ್ರಕಾರ, ಕಳೆದ 6 ದಿನಗಳಲ್ಲಿ ಕನಿಷ್ಠ 70 ಸಾವಿರ ಮಸೀದಿಗಳ ಧ್ವನಿವರ್ಧಕಗಳ ಸೌಂಡ್ ಕಡಿಮೆ ಮಾಡಲಾಗಿದೆ. ದೊಡ್ಡ ಶಬ್ಧ, ಖಿನ್ನತೆ, ಕಿರಿಕಿರಿಯುಂಟು ಮಾಡ್ತಿದೆ ಎಂದು ಅನೇಕರು ದೂರು ನೀಡಿದ್ದರಂತೆ.
ಆಗಾಗ ಮಕ್ಕಳನ್ನು ಕಾಡುವ ತಲೆನೋವಿನ ಬಗ್ಗೆ ನಿರ್ಲಕ್ಷ್ಯ ಬೇಡ
ಜಕಾರ್ತಾದ ಅಲ್-ಇಕ್ವಾನ್ ಮಸೀದಿಯ ಅಧ್ಯಕ್ಷ ಅಹ್ಮದ್ ತೌಫಿಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಧ್ವನಿವರ್ಧಕಗಳ ಶಬ್ಧ ಕಡಿಮೆ ಮಾಡಿದ್ದು, ಸ್ವಂತ ನಿರ್ಧಾರ. ಯಾರ ಒತ್ತಡವೂ ಇದಕ್ಕಿಲ್ಲವೆಂದು ಅವರು ಹೇಳಿದ್ದಾರೆ.
ಮಸೀದಿಯ ಕೆಲ ಧ್ವನಿವರ್ಧಕ ಸರಿಯಾಗಿರಲಿಲ್ಲ. ಇದ್ರಿಂದ ಬರ್ತಿದ್ದ ಶಬ್ಧ ಮಾನಸಿಕ ಖಿನ್ನತೆ, ನಿದ್ರಾಹೀನತೆಗೂ ಕಾರಣವಾಗಿತ್ತಂತೆ. ಆನ್ಲೈನ್ ನಲ್ಲಿ ಈ ಬಗ್ಗೆ ದೂರುಗಳು ಬಂದಿದ್ದವಂತೆ.