alex Certify ಈ ಗ್ರಾಮದಲ್ಲಿದೆ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ ದೇಗುಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಗ್ರಾಮದಲ್ಲಿದೆ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ ದೇಗುಲ

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಮಧ್ಯ ಪ್ರದೇಶದ ಬುಡಕಟ್ಟು ಸಮಾಜದ ಪಾಲಿಗೆ ದೇವತೆ ಇದ್ದಂತೆ ಎಂದು ಹೇಳಿದರೆ ತಪ್ಪಾಗಲಾರದು.

ಏಕೆಂದರೆ ಇಂದಿರಾ ಗಾಂಧಿ ತಮ್ಮ ಅಧಿಕಾರಾವಧಿಯಲ್ಲಿ ಈ ಜನಾಂಗದ ಜನತೆಗೆ ಸಾಕಷ್ಟು ಸವಲತ್ತುಗಳನ್ನ ಒದಗಿಸಿದ್ದಾರೆ.

ಇಲ್ಲಿನ ಜನರೇ ಹೇಳುವಂತೆ ದೇವರು ಪ್ರತ್ಯಕ್ಷನಾಗಿ ಬಂದು ನಮಗೆ ಏನೆಲ್ಲ ವರವನ್ನು ನೀಡಬಹುದಿತ್ತೋ ಅದೆಲ್ಲವನ್ನು ಇಂದಿರಾ ಗಾಂಧಿ ತಮ್ಮ ಅಧಿಕಾರಾವಧಿಯಲ್ಲಿ ಮಾಡಿ ತೋರಿಸಿದ್ದಾರೆ ಎಂದು ಹೇಳುತ್ತಾರೆ.

ಇದೇ ಕಾರಣಕ್ಕಾಗಿ ಮಧ್ಯ ಪ್ರದೇಶದ ಖಾರ್ಗೋನ್​​ ಜಿಲ್ಲೆಯ ಝಿರ್ನಿಯಾ ಎಂಬ ಪ್ರದೇಶದ ಪಂಡ್ಲಿಯಾ ಗ್ರಾಮದಲ್ಲಿ ಇಂದಿರಾ ಗಾಂಧಿಯವರಿಗಾಗಿ ಬುಡಕಟ್ಟು ಜನಾಂಗದವರು ದೇವಸ್ಥಾನವನ್ನೇ ಕಟ್ಟಿಸಿದ್ದಾರೆ.

ಈ ದೇವಸ್ಥಾನದಲ್ಲಿ ಇಂದಿರಾ ಗಾಂಧಿಯವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ದೇವಸ್ಥಾನದ ಗೋಡೆಯನ್ನು ತ್ರಿವರ್ಣದಿಂದ ಅಲಂಕರಿಸಲಾಗಿದೆ.
ಬುಡಕಟ್ಟು ಜನಾಂಗದವರ ಆಸೆಯಂತೆ ಈ ದೇವಸ್ಥಾನವನ್ನು 1987ರ ಏಪ್ರಿಲ್​ 14ರಂದು ಅನುಷ್ಠಾನಗೊಳಿಸಲಾಗಿತ್ತು.

ಅಂದಿನ ಕಾಂಗ್ರೆಸ್​ ಶಾಸಕರಾಗಿದ್ದ ಚಿದಾಬಾಯಿ ದಾವರ್ ಎಂಬವರು ಜೈಪುರದಿಂದ ತಂದ ಈ ಇಂದಿರಾಗಾಂಧಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ರು. ಪ್ರಸ್ತುತ ಚಿದಾಬಾಯಿ ದಾವರ್ ಪುತ್ರ ಕೇದಾರ್​​ ದಾವರ್ ಈ ಕ್ಷೇತ್ರದ ಸ್ವತಂತ್ರ ಶಾಸಕರಾಗಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಶಾಸಕ ಕೇದಾರ್​, ಬುಡಕಟ್ಟು ಜನಾಂಗದವರು ಇಂದಿರಾಗಾಂಧಿಯವರನ್ನು ದೇವರಂತೆ ಕಾಣುತ್ತಾರೆ. ಬುಡಕಟ್ಟು ಜನಾಂಗದವರ ಜೀವನವನ್ನೇ ಬದಲಿಸುವಂತಹ ಸಾಕಷ್ಟು ಯೋಜನೆಗಳು ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ಜಾರಿಗೆ ಬಂದಿತ್ತು. ಇದೇ ಕಾರಣಕ್ಕೆ ಈ ಜನತೆ ಇಂದಿರಾ ಗಾಂಧಿಯವರನ್ನು ರಾಜಕಾರಣಿಯಾಗಿ ಕಾಣದೇ ದೇವರಂತೆ ಪೂಜಿಸುತ್ತಾರೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...