
ಹಾವೇರಿ: ಸಿಎಂ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಬಡವರ ಹೊಟ್ಟೆ ತುಂಬಿಸುವ ಕೇಂದ್ರ ಇಂದಿರಾ ಕ್ಯಾಂಟೀನ್ ಜಿಲ್ಲೆಗಳಲ್ಲಿ ಮುಚ್ಚುವ ಸ್ಥಿತಿಯಲ್ಲಿದ್ದರೆ ಇನ್ನು ಹಲವು ಜಿಲೆಗಳಲ್ಲಿ ಪುನರಾರಂಭವೇ ಆಗಿಲ್ಲ. ಈ ನಡುವೆ ಅಧಿಕಾರಿಗಳು ಹಾಗೂ ಗುತ್ತಿಗೆದರರ ಜಟಾಪಟಿಗೆ ಹಾವೇರಿ ಜಿಲ್ಲೆಯ ಹಲವು ಇಂದಿರಾ ಕ್ಯಾಂಟೀನ್ ಗಳು ಬಂದ್ ಆಗಿವೆ ಎನ್ನಲಾಗುತ್ತಿದೆ.
ಹಾವೇರಿ ಜಿಲ್ಲೆಯಲ್ಲಿ ಮೂರು ಇಂದಿರಾ ಕ್ಯಾಂಟೀನ್ ಗಳ ಬಿಲ್ ಪಾವತಿ ಮಾಡಲು ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ.
ಗುತ್ತಿಗೆದಾರ ವಿಶ್ವನಾಥ್ ದರ್ಶನಾಪೂರ, ಅಧಿಕಾರಿಗಳ ಕಮಿಷನ್ ಹಾವಳಿಗೆ ಬೇಸತ್ತಿದ್ದೇನೆ. ಹಳೆ ಬಿಲ್ ಪಾವತಿ ಮಾಡಿಸಿ ನನ್ನನ್ನು ಟೆಂಡರ್ ನಿಂದ ಮುಕ್ತ ಮಾಡಿ ಎಂದು ಅಳಲು ತೋಡಿಕೊಂಡಿದ್ದಾರೆ.
ಆದರೆ ಗುತ್ತಿಗೆದಾರನ ಆರೋಪ ನಿರಾಕರಿಸಿರುವ ಹಾವೇರಿ ನಗರಾಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಮಮತಾ, ಕಳೆದ ನವೆಂಬರ್ ತಿಂಗಳಿಂದ ಏಪ್ರಿಲ್ ತಿಂಗಳವರೆಗೂ ಅಲ್ಲಿನ ಬಿಲ್ ಗೆ ವ್ಯತ್ಯಾಸ ಬಂದಿದೆ. ಮಾಹಿತಿ ನೀಡುವಂತೆ ನೋಟೀಸ್ ನೀಡಿದ್ದೇವೆ. ನಮ್ಮ ನೋಟಿಸ್ ಗೆ ಉತ್ತರ ನೀಡದೇ ಅನಗತ್ಯ ಆರೊಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅಧಿಕಾರಿಗಳ ಹಾಗೂ ಗುತ್ತಿಗೆದರರ ಜಗಳಕ್ಕೆ ಬಡವರಿಗೆ ಅನ್ನ ಪೂರೈಸುವ ಇಂದಿರಾ ಕ್ಯಾಂಟೀನ್ ನಡೆಸಲು ಸಾಧ್ಯವಿಲ್ಲದ ಸ್ಥಿತಿ ಎದುರಾಗಿದೆ.