ಬೆಂಗಳೂರು : ರಾಜ್ಯ ಸರ್ಕಾರ ನಂದಿ ಹಿಲ್ಸ್ ನಲ್ಲಿ ‘ಇಂದಿರಾ ಕ್ಯಾಂಟೀನ್’ ಮಾದರಿ ‘ಮಯೂರ್ ಹೋಟೆಲ್’ ಆರಂಭಿಸಿದ್ದು, ಈ ಮೂಲಕ ಪ್ರವಾಸಿಗರು ಅಗ್ಗದ ದರದಲ್ಲಿ ಊಟ ಉಪಹಾರ ಸೇವಿಸಬಹುದಾಗಿದೆ.
ಹೌದು. ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಆರಂಭವಾಗಿರುವ ಮಯೂರ್ ಹೋಟೆಲ್ ನಲ್ಲಿ ಅತ್ಯಂತ ಕಡಿಮೆ ದರದಲ್ಲಿ ತಿಂಡಿ, ತಿನಿಸು ಸಿಗಲಿದ್ದು, ಜನ ಸಾಮಾನ್ಯರೂ ನೆಮ್ಮದಿಯಾಗಿ ಊಟ ತಿಂಡಿ ಸೇವಿಸಬಹುದು. ನಂದಿ ಗಿರಿಧಾಮದಲ್ಲಿ ಯಾವಾಗಲೂ ಪ್ರವಾಸಿಗರು ಕಿಕ್ಕಿರಿದು ಸೇರಿರುತ್ತಾರೆ. ಅದರಲ್ಲೂ ವೀಕೆಂಡ್ ಬಂದರೆ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಅಲ್ಲದೇ ನಂದಿಬೆಟ್ಟದಲ್ಲಿ ಇರುವ ಹೋಟೆಲ್ ಗಳಲ್ಲಿ ಊಟ , ತಿಂಡಿ ದರ ದುಬಾರಿಯಾಗಿದೆ ಎಂಬ ದೂರು ಬಂದಿತ್ತು. ಈ ಹಿನ್ನೆಲೆ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ.
ಯಾವುದಕ್ಕೆ ಎಷ್ಟು ದರ ಎಂಬುವುದನ್ನು ನೋಡುವುದಾದರೆ
ಟೀ/ಕಾಫಿ – 10 ರೂ.
ಅನ್ನ ಸಾಂಬರ್ -20 ರೂ..
ಉಪ್ಪಿಟ್ಟು -20 ರೂ.
ಮೊಸರನ್ನ – 15 ರೂ.
ಕೇಸರಿಬಾತ್ – 20 ರೂ
ಬಿಸಿಬೇಳೆಬಾತ್ – 20 ರೂ.
ರೈಸ್ಬಾತ್ – 20 ರೂ.
ನಂದಿಬೆಟ್ಟದಲ್ಲಿರುವ ಖಾಸಗಿ ಕ್ಯಾಂಟೀನ್ಗಳಲ್ಲಿ ಊಟ ತಿಂಡಿ ದರ ದುಪ್ಪಟ್ಟಿದ್ದು, ಯಾವುದೇ ತಿಂಡಿಗೆ ಕನಿಷ್ಠ 50 ರೂ. ಕೊಡಬೇಕು. ಇನ್ಜು ಕಾಫಿ 20 ರಿಂದ 25 ರೂ ಫಿಕ್ಸ್ ಮಾಡಲಾಗಿದೆ. ಈ ಹಿನ್ನೆಲೆ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.