ಬೆಂಗಳೂರು: ಇಂದಿರಾ ಕ್ಯಾಂಟೀನ್ ಮೆನು ಬದಲಾವಣೆಯಾಗಲಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಸ್ಥಳೀಯ ತಿಂಡಿ ತಿನಿಸು ಒಳಗೊಂಡಂತೆ ರುಚಿ ಮತ್ತು ಶುಚಿಯಾದ ಊಟ ಪೂರೈಕೆ ಮಾಡಲಾಗುವುದು ಎಂದು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ರೊಟ್ಟಿ, ಚಪಾತಿ, ಚಟ್ನಿ, ಸಾಗು, ಅನ್ನ. ಒಂದು ಸಿಹಿ ತಿಂಡಿ. ಉಪ್ಪಿನಕಾಯಿ ಹೀಗೆ ನಾನಾ ರೀತಿಯ ಆಹಾರ ಪದಾರ್ಥಗಳು ಊಟದಲ್ಲಿ ಸೇರಿರುತ್ತವೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಸ್ಥಳೀಯ ತಿಂಡಿ ತಿನಿಸು ಒಳಗೊಂಡಂತೆ ಈ ಬಗ್ಗೆ ಸ್ಥಳೀಯವಾಗಿ ನಿರ್ಣಯ ಕೈಗೊಂಡು ಅಲ್ಲೇ ಟೆಂಡರ್ ಕರೆಯಲು ಅವಕಾಶ ಕಲ್ಪಿಸಲಾಗುತ್ತದೆ. ರುಚಿ ಮತ್ತು ಶುಚಿ ಕಾಪಾಡಲು ಹೊತ್ತು ನೀಡಲಾಗುತ್ತಿದ್ದು, ಅಧಿಕಾರಿಗಳಿಗೆ ಸ್ಪಷ್ಟ ಮಾರ್ಗಸೂಚಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಇನ್ನು ಮುಂದೆ ಇಂದಿರಾ ಕ್ಯಾಂಟೀನ್ ಗಳಲ್ಲಿ ಸ್ಥಳೀಯ ತಿಂಡಿ ತಿನಿಸು ಒಳಗೊಂಡ ಭರ್ಜರಿ ಭೋಜನ ಸಿಗಲಿದೆ. ತಿಂಡಿಗೆ 5 ರೂ., ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ತಲಾ 10 ರೂಪಾಯಿ ಮುಂದುವರೆಯಲಿದೆ ಎಂದು ಹೇಳಲಾಗಿದೆ.