ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಟೇಕಾಫ್ ಸಮಯದಲ್ಲಿ ರನ್ ವೇಯಿಂದ ಸ್ಕಿಡ್ ಆಗಿ ಕೆಸರಿನ ಹೊರಾಂಗಣದಲ್ಲಿ ಸಿಕ್ಕಿಬಿದ್ದ ಕಾರಣ ರದ್ದುಗೊಳಿಸಲಾಗಿದೆ.
ಇಂಡಿಗೋ ವಿಮಾನ 6E757 ಜೋರ್ಹತ್-ಕೋಲ್ಕತ್ತಾ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವಿಮಾನ ನಿಲ್ದಾಣದ ಉದ್ಯೋಗಿಯೊಬ್ಬರು ದೃಢಪಡಿಸಿದ್ದಾರೆ.
ಅಧಿಕಾರಿಯ ಪ್ರಕಾರ, ಜೋರ್ಹತ್-ಕೋಲ್ಕತ್ತಾ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ವಿಮಾನವು ತಾಂತ್ರಿಕ ದೋಷದಿಂದಾಗಿ ಜೋರ್ಹತ್ ನಲ್ಲಿ ಹಲವು ಗಂಟೆಗಳ ಕಾಲ ವಿಳಂಬವಾಗಿದ್ದು, ಅಂತಿಮವಾಗಿ ಹಾರಾಟ ರದ್ದುಗೊಳಿಸಲಾಗಿದೆ.
ಇಂಡಿಗೋ ವಿಮಾನ ರನ್ ವೇಯಿಂದ ಹೊರಬಂದು ಔಟ್‌ಫೀಲ್ಡ್ ನಲ್ಲಿ ಸಿಕ್ಕಿಬಿದ್ದಿದೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ತನಿಖೆಗಾಗಿ ತಂಡವನ್ನು ರಚಿಸಲಾಗಿದೆ. ವಿಮಾನದ ಆರಂಭಿಕ ತಪಾಸಣೆಯ ಸಮಯದಲ್ಲಿ ಯಾವುದೇ ಅಸಹಜತೆಗಳು ಕಂಡುಬಂದಿಲ್ಲ ಎಂದು ಇಂಡಿಗೋ ಏರ್ಲೈನ್ಸ್ ತಿಳಿಸಿದೆ.
ಇಂಡಿಗೋ ಫ್ಲೈಟ್ ಅಸ್ಸಾಂನ ಜೋರ್ಹತ್ ವಿಮಾನ ನಿಲ್ದಾಣದ ಕೆಸರು ಗದ್ದೆಯಲ್ಲಿ ಸಿಲುಕಿಕೊಂಡಿದೆ. ವಿಮಾನವು ಮಧ್ಯಾಹ್ನ 2.20 ಕ್ಕೆ ಹೊರಡಬೇಕಿತ್ತು. ಆದರೆ ಘಟನೆಯ ನಂತರ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. ವಿಮಾನದಲ್ಲಿ 98 ಪ್ರಯಾಣಿಕರಿದ್ದರು. ಎಲ್ಲಾ ಪ್ರಯಾಣಿಕರು ಡಿಬೋರ್ಡ್ ಆಗಿದ್ದಾರೆ ಮತ್ತು ಸುರಕ್ಷಿತವಾಗಿದ್ದಾರೆ.