ನವದೆಹಲಿ: ಅಮೃತಸರದಿಂದ ಬಂದ ಇಂಡಿಗೋ ವಿಮಾನವು ಭಾನುವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಟ್ಯಾಕ್ಸಿವೇ ತಪ್ಪಿಸಿಕೊಂಡಿದೆ. ಇದರಿಂದಾಗಿ ಸುಮಾರು 15 ನಿಮಿಷಗಳ ಕಾಲ ರನ್‌ವೇ ಒಂದನ್ನು ನಿರ್ಬಂಧಿಸಲಾಗಿತ್ತು.
A320 6E 2221 ವಿಮಾನ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(IGIA) ಗೊತ್ತುಪಡಿಸಿದ ಟ್ಯಾಕ್ಸಿವೇಯನ್ನು ತಪ್ಪಿಸಿಕೊಂಡ ನಂತರ ರನ್ ವೇ 28/10 ರ ಅಂತ್ಯಕ್ಕೆ ಹೋಯಿತು.
ಘಟನೆಯಿಂದಾಗಿ ಸುಮಾರು 15 ನಿಮಿಷಗಳ ಕಾಲ ರನ್ ವೇ ನಿರ್ಬಂಧಿಸಲಾಗಿದ್ದು, ಕೆಲವು ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ. ಇಂಡಿಗೋ ಟೋಯಿಂಗ್ ವ್ಯಾನ್ ವಿಮಾನವನ್ನು ರನ್ ವೇಯ ಡೆಡ್ ಎಂಡ್ ನಿಂದ ಪಾರ್ಕಿಂಗ್ ಬೇ ಗೆ ಎಳೆದಿದೆ. IGIA ದೇಶದ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ. ಪ್ರತಿದಿನ ಸುಮಾರು 1,400 ವಿಮಾನಗಳನ್ನು ನಿರ್ವಹಿಸುತ್ತದೆ. ಇದು ನಾಲ್ಕು ಕಾರ್ಯಾಚರಣೆಯ ರನ್ ವೇಗಳನ್ನು ಹೊಂದಿದೆ.