ಯುಎಇಯಿಂದ ಲಕ್ನೋಗೆ ಬರ್ತಿದ್ದ ಪ್ರಯಾಣಿಕನೊಬ್ಬ ಲಕ್ನೋಗೆ ಜೀವಂತ ಬರಲಿಲ್ಲ. ವಿಮಾನದಲ್ಲಿಯೇ ಆತನ ಆರೋಗ್ಯ ಹದಗೆಟ್ಟಿತ್ತು. ತುರ್ತು ಚಿಕಿತ್ಸೆ ಫಲ ನೀಡಲಿಲ್ಲ. ಪ್ರಯಾಣಿಕರ ಕರಾಚಿಯಲ್ಲಿ ಸಾವನ್ನಪ್ಪಿದ್ದಾನೆ. ತುರ್ತು ವೈದ್ಯಕೀಯ ತಂಡ ಪ್ರಯಾಣಿಕ ಸಾವನ್ನಪ್ಪಿದ್ದಾನೆಂದು ಸ್ಪಷ್ಟಪಡಿಸಿದೆ.
ಯುಎಇಯ ಶಾರ್ಜಾದಿಂದ ಲಕ್ನೋಗೆ ವಿಮಾನ ಬರುತ್ತಿತ್ತು. ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ವೈದ್ಯಕೀಯ ತುರ್ತು ಚಿಕಿತ್ಸೆಗೆ ಲ್ಯಾಂಡ್ ಆಯ್ತು. ಪ್ರಯಾಣಿಕರೊಬ್ಬರ ಆರೋಗ್ಯದಲ್ಲಿ ಏರುಪೇರಾದ ಕಾರಣ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು. ಆದ್ರೆ ಕರಾಚಿಯಲ್ಲಿ ಪ್ರಯಾಣಿಕನಿಗೆ ನೀಡಿದ ಚಿಕಿತ್ಸೆ ಫಲಿಸಲಿಲ್ಲ.
ಇಂಡಿಗೊ ಫ್ಲೈಟ್ 6 ಇ 1412ನಲ್ಲಿ ಲಕ್ನೋಗೆ ಬರ್ತಿದ್ದ ಪ್ರಯಾಣಿಕನ ಆರೋಗ್ಯದಲ್ಲಿ ಏರುಪೇರಾಗಿತ್ತು. ಪ್ರಯಾಣಿಕ ಯಾರು ಹಾಗೂ ಪ್ರಯಾಣಿಕನಿಗೆ ಯಾವ ಸಮಸ್ಯೆಯಾಗಿತ್ತು ಎನ್ನುವ ಬಗ್ಗೆ ಯಾವುದೇ ಮಾಹಿತಿ ಹೊರ ಬಂದಿಲ್ಲ.