ಮುಂಬೈ: ರಾಂಚಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ನಾಗ್ಪುರದಲ್ಲಿ ವೈದ್ಯಕೀಯ ತುರ್ತು ಭೂಸ್ಪರ್ಶ ಮಾಡಿದ್ದು, ದುರಾದೃಷ್ಟವಶಾತ್ ಪ್ರಯಾಣಿಕ ಸಾವುಕಂಡಿದ್ದಾರೆ.
ಸೋಮವಾರ ಮುಂಬೈನಿಂದ ರಾಂಚಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರು ರಕ್ತ ವಾಂತಿ ಮಾಡಲು ಪ್ರಾರಂಭಿಸಿದ ನಂತರ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ ನಂತರ, ಪ್ರಯಾಣಿಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ.
ರಾತ್ರಿ 8 ಗಂಟೆ ಸುಮಾರಿಗೆ ಪ್ರಯಾಣಿಕರಿಗೆ ವಾಂತಿ ಶುರುವಾಯಿತು. ಆತನನ್ನು ದೇವಾನಂದ್ ತಿವಾರಿ ಎಂದು ಗುರುತಿಸಲಾಗಿದೆ.
62 ವರ್ಷದ ತಿವಾರಿ ಅವರು ಸಿಕೆಡಿ ಮತ್ತು ಕ್ಷಯರೋಗದಿಂದ ಬಳಲುತ್ತಿದ್ದರು. ವಿಮಾನದಲ್ಲಿ ರಕ್ತ ವಾಂತಿ ಮಾಡಿಕೊಂಡಿದ್ದಾರೆ ಎಂದು ಕಿಮ್ಸ್ ಆಸ್ಪತ್ರೆಯ ಬ್ರ್ಯಾಂಡಿಂಗ್ ಮತ್ತು ಸಂವಹನಗಳ ಡಿಜಿಎಂ ಏಜಾಜ್ ಶಮಿ ಹೇಳಿದ್ದಾರೆ.