alex Certify BIG NEWS: ಬುದ್ಧಿಮಾಂದ್ಯ ಬಾಲಕನಿಗೆ ಪ್ರವೇಶ ನಿರಾಕರಿಸಿದ್ದ ಇಂಡಿಗೋ ಏರ್ ಲೈನ್ಸ್ ಗೆ ಬಿಗ್ ಶಾಕ್: 5 ಲಕ್ಷ ರೂ. ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬುದ್ಧಿಮಾಂದ್ಯ ಬಾಲಕನಿಗೆ ಪ್ರವೇಶ ನಿರಾಕರಿಸಿದ್ದ ಇಂಡಿಗೋ ಏರ್ ಲೈನ್ಸ್ ಗೆ ಬಿಗ್ ಶಾಕ್: 5 ಲಕ್ಷ ರೂ. ದಂಡ

ನವದೆಹಲಿ: ಇಂಡಿಗೋ ಏರ್‌ ಲೈನ್ಸ್‌ ಗೆ ರೂ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಶನಿವಾರ 5 ಲಕ್ಷ ರೂ. ದಂಡ ವಿಧಿಸಿದೆ.

ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ವಿಶೇಷ ಸಾಮರ್ಥ್ಯವುಳ್ಳ ಬಾಲಕನಿಗೆ ಬೋರ್ಡಿಂಗ್ ಸೌಲಭ್ಯಗಳನ್ನು ಏರ್‌ ಲೈನ್ ನಿರಾಕರಿಸಿದ ಹಿನ್ನಲೆಯಲ್ಲಿ ಫೈನ್ ಹಾಕಲಾಗಿದೆ.

ಮೇ 9 ರಂದು ಡಿಜಿಸಿಎ ಘಟನೆಯ ತನಿಖೆಗೆ ಮೂವರು ಸದಸ್ಯರ ತಂಡವನ್ನು ರಚಿಸಿತ್ತು. ವಿಶೇಷ ಸಾಮರ್ಥ್ಯವುಳ್ಳ ಬಾಲಕನಿಗೆ ವಿಮಾನಯಾನ ಸಂಸ್ಥೆಯು ಪ್ರವೇಶ ನಿರಾಕರಿಸಿತ್ತು. ಈ ಕಾರಣ ಪೋಷಕರು ದೂರು ನೀಡಿದ್ದರು. DGCA ಸಕ್ಷಮ ಪ್ರಾಧಿಕಾರ ಸಂಬಂಧಿತ ಏರ್‌ ಕ್ರಾಫ್ಟ್ ನಿಯಮಗಳ ನಿಬಂಧನೆಗಳ ಅಡಿಯಲ್ಲಿ ಏರ್‌ ಲೈನ್‌ ಗೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...