
ಸಾಮಾಜಿಕ ಜಾಲತಾಣದಲ್ಲಿ ರಂಜನೀಯ ವೀಡಿಯೊಗಳಿಗೇನು ಎಂದಿಗೂ ಕೊರತೆ ಇರದು. ಆಗಿಂದಾಗೆ ಭಾವನಾತ್ಮಕ ವಿಡಿಯೋಗಳೂ ಸಹ ಕಾಣಿಸಿಕೊಳ್ಳುತ್ತದೆ.
ಈಗ ಗಗನ ಸಖಿಯ ವೃತ್ತಿ ಜೀವನದ ಕೊನೆಯ ದಿನದ ವಿಡಿಯೋ ನೆಟ್ಟಿಗರನ್ನು ಭಾವುಕರನ್ನಾಗಿಸುತ್ತಿದೆ. ಸುರಭಿ ನಾಯರ್ ಎಂಬ ಗಗನಸಖಿ ಇಂಡಿಗೋ ವಿಮಾನ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅವರ ವೃತ್ತಿ ಜೀವನದ ಕೊನೆಯ ದಿನದ ಕೊನೆಯ ಸೇವೆಯ ಸಂದರ್ಭದಲ್ಲಿ ಪ್ರಯಾಣಿಕರ ಸಮ್ಮುಖ ವಿದಾಯ ಘೋಷಿಸಿದರು. ಈ ವೇಳೆ ಅವರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು.
ಪ್ರಧಾನಿ ಮೋದಿಯನ್ನು ಅಂಬೇಡ್ಕರ್ಗೆ ಹೋಲಿಸಿದ ಸಂಗೀತ ಮಾಂತ್ರಿಕ ಇಳಯರಾಜ; ಹಲವರಿಂದ ವ್ಯಾಪಕ ತರಾಟೆ
ಒತ್ತರಿಸಿ ಬರುತ್ತಿದ್ದ ದುಃಖ ತಡೆದುಕೊಂಡು ತಮ್ಮ ಕೊನೆಯ ಮಾತುಗಳನ್ನು ಹೇಳಿದರು. ತನ್ನ ಸಂಸ್ಥೆಯ ಬಗ್ಗೆ ಮತ್ತು ಹಿರಿಯರಿಂದ ಕಲಿತ ವಿಷಯಗಳ ಬಗ್ಗೆ ಮಾತನಾಡುವಾಗ ಕಣ್ಣಾಲಿಗಳು ತುಂಬಿರುವುದು ಕಾಣಿಸುತ್ತದೆ.
ಎಲ್ಲರಿಗೂ ಧನ್ಯವಾದಗಳು, ನಮ್ಮೊಂದಿಗೆ ಪ್ರಯಾಣಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮಿಂದಾಗಿಯೇ ನಾವು ಸಮಯಕ್ಕೆ ಸರಿಯಾಗಿ ಅಥವಾ ಸಮಯಕ್ಕಿಂತ ಮುಂಚಿತವಾಗಿ ಸಂಬಳವನ್ನು ಪಡೆಯುತ್ತೇವೆ. ನಮ್ಮ ವಿಮಾನಗಳಂತೆಯೇ ಎಂದು ಕೊನೆಯಲ್ಲಿ ಮಾತು ಮುಗಿಸುವಾಗ ಆಕೆ ನಗುತರಿಸಿಕೊಂಡರು.
ಈ ವಿಡಿಯೋ ವೈರಲ್ ಆಗಿದ್ದು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರು ಸುರಭಿಗೆ ಶುಭ ಹಾರೈಕೆಗಳನ್ನು ಹಂಚಿಕೊಂಡರು.