ಹಬ್ಬ- ಹರಿದಿನಗಳಂದು ಸ್ನೇಹಿತರು, ಬಂಧುಗಳು ಸೇರಿದಾಗ ಕೊಂಚ ಹೆಚ್ಚಾಗಿಯೇ ಊಟ ಮಾಡುತ್ತೇವೆ. ಈ ವೇಳೆ ಸಿಹಿ ತಿನಿಸುಗಳು, ಕರಿದ ಪದಾರ್ಥಗಳ ಸೇವನೆಯಿಂದ ಅಜೀರ್ಣವಾಗಿಬಿಡುತ್ತದೆ.
ಹೀಗೆ ಅಜೀರ್ಣವಾದಾಗ ವೀಳ್ಯೆದೆಲೆಯನ್ನು ಟ್ರೈ ಮಾಡಿ ನೋಡಿ. ಎಳೆಯ ವೀಳ್ಯದೆಲೆಯನ್ನು ಚೆನ್ನಾಗಿ ಅಗಿದು ನುಂಗಿ. ವೀಳ್ಯದೆಲೆಯ ರಸವು ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುವುದರಿಂದ ಹೊಟ್ಟೆಯುಬ್ಬರ, ಹೊಟ್ಟೆಯುರಿ ಮೊದಲಾದ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಹುಳಿತೇಗು, ಹೊಟ್ಟೆಯಲ್ಲಿ ಉರಿ, ಹೊಟ್ಟೆನೋವು, ಮೊದಲಾದ ಸಮಸ್ಯೆಗಳಿಗೆ ತುಳಸಿ ಎಲೆ, ಪುದೀನಾ, ಕರಿಬೇವು ಪರಿಣಾಮಕಾರಿಯಾಗಿರುವುದರಿಂದ ನಮ್ಮ ಹಿತ್ತಲಲ್ಲಿ ದೊರೆಯುವ ಎಲೆಗಳಿಂದ ಅಜೀರ್ಣವನ್ನು ದೂರ ಮಾಡಬಹುದಾಗಿದೆ.