ಜೀವನದಲ್ಲಿ ಒಳ್ಳೆಯ, ಕೆಟ್ಟ ಸಮಯ ಬರುವ ಮುನ್ನ ಕೆಲ ಸಂಕೇತ ಸಿಗುತ್ತೆ. ಜ್ಯೋತಿಷ್ಯದಲ್ಲಿ ಅಂತಹ ಘಟನೆಗಳ ಉಲ್ಲೇಖವಿದೆ. ಈ ಸಂಕೇತಗಳು ಹಣ, ಗೌರವ, ಸಂಬಂಧಗಳು, ಅಪಘಾತಗಳು, ಜಗಳ ಇತ್ಯಾದಿಗಳೊಂದಿಗೆ ಸಂಬಂಧ ಹೊಂದಿವೆ. ಈ ಸಂಕೇತದ ಅರ್ಥ ಗೊತ್ತಾದ್ರೆ ನಾವು ಎಚ್ಚೆತ್ತುಕೊಳ್ಳಬಹುದು.
ಜ್ಯೋತಿಷ್ಯದಲ್ಲಿ ಶನಿಯನ್ನು ನ್ಯಾಯ ದೇವರು ಎಂದು ಕರೆಯಲಾಗುತ್ತದೆ. ಕಾರ್ಯಗಳಿಗೆ ಅನುಗುಣವಾಗಿ ವ್ಯಕ್ತಿಗೆ ಫಲಗಳನ್ನ ಶನಿದೇವ ಕೊಡುತ್ತಾನೆ. ಶನಿಯ ಕ್ರೂರ ದೃಷ್ಟಿ ಯಾವುದೇ ವ್ಯಕ್ತಿ ಮೇಲೆ ಬಿದ್ದರೆ ಆತನ ಜೀವನದಲ್ಲಿ ತೊಂದರೆಯುಂಟಾಗುತ್ತದೆ.
ವ್ಯಕ್ತಿಯ ಶೂಗಳು ಮತ್ತು ಚಪ್ಪಲಿಗಳು ಪದೇ ಪದೇ ಕಳ್ಳತನವಾಗುತ್ತಿದ್ದರೆ, ಆ ವ್ಯಕ್ತಿಯ ಮೇಲೆ ಶನಿಯ ವಕ್ರದೃಷ್ಟಿ ಬಿದ್ದಿದೆ ಎಂದರ್ಥ. ಆದ್ದರಿಂದ ಎಚ್ಚರಿಕೆಯಲ್ಲಿರಿ.
ಪ್ರತಿದಿನ ಕೆಟ್ಟ ಕನಸುಗಳು ಬಂದರೆ, ಅದು ಮನೆಯ ಜಗಳದ ಸಂಕೇತ ಅಥವಾ ಮನೆಯ ಯಾವುದೇ ಸದಸ್ಯನಿಗೆ ತೊಂದರೆಯಾಗಲಿದೆ ಎಂಬ ಸಂಕೇತವಾಗಿದೆ. ದುಃಸ್ವಪ್ನಗಳ ಕುರಿತು ಯಾರೊಂದಿಗೂ ಹೆಚ್ಚು ಚರ್ಚೆ ಮಾಡಬೇಡಿ.
ಎಷ್ಟೇ ಕೆಲಸ ಮಾಡಿದ್ರೂ ಒಮ್ಮಿಂದೊಮ್ಮೆ ಹಣ ಬರುವುದು ನಿಂತು ಬಿಡುತ್ತೆ. ಪದೇ ಪದೇ ನಷ್ಟವನ್ನ ಅನುಭವಿಸಬೇಕಾಗುತ್ತದೆ. ಇದು ಶನಿಯು ಅಶುಭದ ಪರಿಣಾಮ. ಶನಿಯ ಪ್ರಕೋಪದಿಂದಾಗಿ ಪದೇ ಪದೇ ನಷ್ಟವಾಗುತ್ತೆ.
ಮಹಿಳೆಯ ಬಲಗಣ್ಣು ಮತ್ತು ಪುರುಷನ ಎಡ ಕಣ್ಣು ಫಟ ಫಟ ಎಂದು ಹೊಡೆದುಕೊಳ್ತಿದ್ರೆ ಅದು ಒಳ್ಳೆಯ ಸೂಚನೆ ಅಲ್ಲ. ಈ ಸಮಯದಲ್ಲಿ ದೇವರನ್ನು ಪ್ರಾರ್ಥಿಸಿ ಮತ್ತು ಸಕಾರಾತ್ಮಕವಾಗಿ ಯೋಚಿಸಿ.
ಎರಡು ಹಲ್ಲಿಗಳ ನಡುವೆ ಕಾದಾಟ ನಡೆಯೋದನ್ನ ನೋಡಿದರೆ ಅದು ಸಹ ತೊಂದರೆಯ ಸಂಕೇತ. ಇದು ಕಣ್ಣಿಗೆ ಬಿದ್ದರೆ ಹಲ್ಲಿಗಳನ್ನು ಬೇರ್ಪಡಿಸಿ.