ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಆರೋಗ್ಯಕ್ಕೆ ಉತ್ತಮದಾಯಕ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN) ಸಲಹೆ ನೀಡಿದೆ. ಭಾರತೀಯರಿಗೆ ಆಹಾರದ ಮಾರ್ಗಸೂಚಿಗಳ ಬಗ್ಗೆ ಅಪ್ ಡೇಟ್ ಮಾಹಿತಿ ನೀಡಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ವ್ಯಾಪಕವಾದ ಸಂಶೋಧನೆ, ತಜ್ಞರೊಂದಿಗೆ ಸಮಾಲೋಚನೆ ಮತ್ತು ಪೌಷ್ಟಿಕಾಂಶ ಮತ್ತು ಆರೋಗ್ಯದ ಕುರಿತು ಇತ್ತೀಚಿನ ವೈಜ್ಞಾನಿಕ ಪುರಾವೆಗಳ ಸಂಪೂರ್ಣ ಪರಿಶೀಲನೆಯ ನಂತರ ಈ ಮಾರ್ಗದರ್ಶನ ನೀಡಿದೆ. ವಿಕಸನಗೊಳ್ಳುತ್ತಿರುವ ಜೀವನಶೈಲಿ, ಸಾಮಾನ್ಯ ರೋಗಗಳು ಮತ್ತು ಬದಲಾಗುತ್ತಿರುವ ಆಹಾರ ಪದ್ಧತಿಗಳನ್ನು ಪರಿಗಣಿಸಿ ಭಾರತೀಯರಿಗೆ ಅತ್ಯಂತ ನವೀಕೃತ ಆಹಾರ ಸಲಹೆಯನ್ನು ನೀಡಿದೆ.
ಮಣ್ಣಿನ ಪಾತ್ರೆಗಳ ಪರಿಸರ ಸ್ನೇಹಪರತೆ, ಕಡಿಮೆ ತೈಲ ಅಗತ್ಯ ಮತ್ತು ಪೋಷಕಾಂಶಗಳನ್ನು ಸಂರಕ್ಷಿಸುವ ಸಾಮರ್ಥ್ಯವನ್ನು ಪ್ರಮುಖ ಅನುಕೂಲಗಳಾಗಿ ಉಲ್ಲೇಖಿಸಿದೆ. ಈ ನವೀಕರಣವು ಭಾರತೀಯರಿಗೆ ತಮ್ಮ ಪಾತ್ರೆ ಮತ್ತು ಅಡುಗೆ ವಿಧಾನಗಳ ಬಗ್ಗೆ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಆರಿಸಿಕೊಳ್ಳಲು ಅನುವು ಮಾಡಿದೆ.
ಬೆಂಗಳೂರಿನ ಆಸ್ಟರ್ CMI ಆಸ್ಪತ್ರೆಯ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ಸೇವೆಗಳ ಮುಖ್ಯಸ್ಥ ಎಡ್ವಿನಾ ರಾಜ್, ಮಣ್ಣಿನ ಪಾತ್ರೆ ಸಮಾನ ಶಾಖ ವಿತರಣೆಯನ್ನು ನೀಡುತ್ತದೆ ಮತ್ತು ಆಹಾರದಲ್ಲಿ ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವಿವರಿಸಿದ್ದಾರೆ. ಅದರ ಸೂಕ್ಷ್ಮ ಸ್ವಭಾವ ಮತ್ತು ಜಾಗರೂಕತೆಯಿಂದ ನಿರ್ದಿಷ್ಟ ವಿಧಾನದಲ್ಲಿ ಶುಚಿಗೊಳಿಸುವ ವಿಧಾನದಿಂದ ಪ್ರತಿ ಅಡುಗೆಮನೆಗೆ ಇಲ್ಲ ಎಂದಿದ್ದಾರೆ. ಆರೋಗ್ಯ ದೃಷ್ಟಿಯಲ್ಲಿ ನಾನ್-ಸ್ಟಿಕ್ ಪಾತ್ರೆಗಳು ಹಾನಿಕಾರಕವೆಂದಿದ್ದು ಊಟ ಮಾಡಲು ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆ ಅತ್ಯುತ್ತಮ ಆಯ್ಕೆ ಎಂದಿದ್ದಾರೆ.