ಅತ್ಯಂತ ಕೈಗೆಟುಕುವ ದರದಲ್ಲಿ ಮನೆ ಖರೀದಿಸುವವರಿಗೆ ಅಹ್ಮದಾಬಾದ್ ಹೇಳಿ ಮಾಡಿಸಿದ ನಗರವಾಗಿದೆ. ದೇಶದಲ್ಲಿ ಸುಲಭ ದರದಲ್ಲಿ ಮನೆ ಖರೀದಿಗೆ ಯೋಗ್ಯವಾದ ನಗರಗಳ ಪೈಕಿ ಅಹ್ಮದಾಬಾದ್ ಮೊದಲ ಸ್ಥಾನದಲ್ಲಿದ್ದರೆ, ಸಿಲಿಕಾನ್ ಸಿಟಿ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ.
ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ ಕೈಗೆಟುಕುವ ಸೂಚ್ಯಂಕದಲ್ಲಿ ಅಹ್ಮದಾಬಾದ್ ಗೆ ಮೊದಲ ಸ್ಥಾನ ಸಿಕ್ಕಿದೆ.
ಈ ಸೂಚ್ಯಂಕದ ಪ್ರಕಾರ ಟಾಪ್ 5 ರಲ್ಲಿ ಇರುವ ನಗರಗಳೆಂದರೆ ಅಹ್ಮದಾಬಾದ್, ಪುಣೆ, ಚೆನ್ನೈ, ಬೆಂಗಳೂರು ಮತ್ತು ಎನ್ ಸಿ ಆರ್.
ಇನ್ನು ಮುಂಬೈ ಅತ್ಯಂತ ದುಬಾರಿ ನಗರವಾಗಿ ಹೊರಹೊಮ್ಮಿದೆ. ನಂತರದ ಸ್ಥಾನದಲ್ಲಿ ಹೈದ್ರಾಬಾದ್ ನಗರವಿದೆ.
2010 ರ ನಂತರದಿಂದ ಮನೆ ಖರೀದಿ ಸೋವಿಯಾಗತೊಡಗಿದೆ. ಇದಕ್ಕೆ ಪ್ರಮುಖ ಕಾರಣ ಗೃಹ ಸಾಲದ ಮೇಲಿನ ಬಡ್ಡಿ ದರದಲ್ಲಿ ಕಡಿತವಾಗಿರುವುದು ಮತ್ತು ಸುಲಭ ಮಾಸಿಕ ಕಂತುಗಳು ಲಭ್ಯವಾಗುತ್ತಿರುವುದು.