ಮಿಜೋರಾಂನ ರಾಜಧಾನಿ ಐಜ್ವಾಲ್ ಟ್ರಾಫಿಕ್ ಜಾಮ್ ತಪ್ಪಿಸಲು ಸ್ವಯಂ ಹೇರಿದ ಡ್ರೈವಿಂಗ್ ಕೋಡ್ ಅನ್ನು ಅನುಸರಿಸುತ್ತಾರೆ. ಆದ್ದರಿಂದ ಈ ಊರನ್ನು ರಾಮರಾಜ್ಯದ ಕನಸಿನ ಊರು ಎಂದೂ ಕರೆಯುತ್ತಾರೆ.
ಭಾರತದ ಹಲವು ಕಡೆಗಳಲ್ಲಿ ಟ್ರಾಫಿಕ್ ಕಿರಿಕಿರಿ ಅಷ್ಟಿಷ್ಟಲ್ಲ. ವಾಹನ ಸವಾರರಲ್ಲಿಯೂ ಶಿಸ್ತು ಇಲ್ಲ. ಎಲ್ಲರಿಗೂ ಮುನ್ನುಗ್ಗುವ ಧಾವಂತ. ಆದರೆ ಐಜ್ವಾಲ್ ಮಾತ್ರ ಎಲ್ಲದ್ದಕ್ಕೂ ಭಿನ್ನ. ಗಮನಾರ್ಹ ಸಂಚಾರ ಶಿಸ್ತಿನ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗಿದೆ.
ರಸ್ತೆಯ ಒಂದು ಬದಿಯಲ್ಲಿ ಒಂದರ ನಂತರ ಒಂದರಂತೆ ಕಾರುಗಳನ್ನು ನಿಲ್ಲಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆತುರ ಪಡದೆ, ಹಾರ್ನ್ ಮಾಡದೆ ಅಥವಾ ಪರಸ್ಪರ ಮುನ್ನುಗ್ಗಲು ಪ್ರಯತ್ನಿಸದೆ, ವಾಹನಗಳು ಲೀಡ್ ವಾಹನದ ಹಿಂದೆ ಸಾಲಿನಲ್ಲಿ ಚಲಿಸುವುದನ್ನು ಇದರಲ್ಲಿ ಕಾಣಬಹುದಾಗಿದೆ.
ಎಲ್ಲಾ ಸವಾರರು ಹೆಲ್ಮೆಟ್ ಧರಿಸಿ ಮತ್ತೊಂದು ಲೇನ್‌ನಲ್ಲಿ ದ್ವಿಚಕ್ರ ವಾಹನಗಳು ಚಲಿಸುವುದನ್ನು ಗಮನಿಸಬಹುದು. ಲೇನ್‌ಗಳನ್ನು ಪ್ರತ್ಯೇಕಿಸಲು ಯಾವುದೇ ಮಾರ್ಕರ್‌ಗಳು ಅಥವಾ ವಿಭಜಕಗಳ ಅನುಪಸ್ಥಿತಿಯ ಹೊರತಾಗಿಯೂ, ಪ್ರಯಾಣಿಕರು ತಮ್ಮದೇ ಆದ ಲೇನ್ ಟ್ರಾಫಿಕ್ ಅನ್ನು ನಿಯಂತ್ರಿಸುವುದನ್ನು ಕಾಣಬಹುದು. ಐಜ್ವಾಲ್ ಅನ್ನು ಭಾರತದ ಏಕೈಕ ಮಾದರಿ ನಗರವೆಂದು ಪ್ರಶಂಸಿಸಲಾಗುತ್ತದೆ.