alex Certify 150 ವರ್ಷದಲ್ಲೇ ಮೊದಲ ಬಾರಿ ಜನಗಣತಿ ವಿಳಂಬ: ಇನ್ನೂ ಎರಡು ವರ್ಷ ಮುಂದೂಡಿಕೆ…? ಮೊದಲ ಬಾರಿಗೆ ಡಿಜಿಟಲ್ ಗಣತಿ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

150 ವರ್ಷದಲ್ಲೇ ಮೊದಲ ಬಾರಿ ಜನಗಣತಿ ವಿಳಂಬ: ಇನ್ನೂ ಎರಡು ವರ್ಷ ಮುಂದೂಡಿಕೆ…? ಮೊದಲ ಬಾರಿಗೆ ಡಿಜಿಟಲ್ ಗಣತಿ ಸಾಧ್ಯತೆ

ನವದೆಹಲಿ: ಜನಗಣತಿ ಆರಂಭವಾದ 150 ವರ್ಷಗಳಲ್ಲೇ ಮೊದಲ ಬಾರಿಗೆ ಗಣತಿಯಲ್ಲಿ ವಿಳಂಬ ಆಗುವ ಸಾಧ್ಯತೆ ಇದೆ.

ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆಯುತ್ತಿತ್ತು. 2021 ರಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಜನಗಣತಿ 2024ರ ಲೋಕಸಭೆ ಚುನಾವಣೆ ಮುಗಿಯುವವರೆಗೂ ನಡೆಯುವುದು ಅನುಮಾನವೆನ್ನಲಾಗಿದ್ದು, ಹೀಗಾದಲ್ಲಿ ಜನಗಣತಿ ಆರಂಭವಾದ 150 ವರ್ಷಗಳಲ್ಲೇ ಮೊದಲ ಸಲ ಗಣತಿಯಲ್ಲಿ ವಿಳಂಬವಾದಂತೆ ಆಗಲಿದೆ.

2011ರಲ್ಲಿ ಕಳೆದ ಜನಗಣತಿ ನಡೆದಿದ್ದು, 2021 ರಲ್ಲಿ ಜನಗಣತಿ ನಡೆಯಬೇಕಿತ್ತು. 2019 ರಲ್ಲಿಯೇ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿ 8,754 ಕೋಟಿ ರೂ. ಅನುದಾನ ಕಾಯ್ದಿರಿಸಿತ್ತು. 33 ಲಕ್ಷ ಗಣತಿದಾರರನ್ನು ನಿಗದಿಪಡಿಸಲಾಗಿತ್ತು. 2020ರ ಏಪ್ರಿಲ್ ನಿಂದ ಸೆಪ್ಟಂಬರ್ ಮತ್ತು 2021ರ ಫೆಬ್ರವರಿಯಲ್ಲಿ ಎರಡು ಹಂತಗಳಲ್ಲಿ ಜನಗಣತಿ ನಡೆಸಲು ಪ್ಲಾನ್ ಮಾಡಿಕೊಳ್ಳಲಾಗಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಜನಗಣತಿ ಮುಂದೂಡಿಕೆಯಾಗಿದ್ದು, ಕಳೆದ ಎರಡು ವರ್ಷದಲ್ಲಿ ಗಣತಿ ನಡೆಸಲು ಸಾಧ್ಯವಾಗಿಲ್ಲ. 2024ರ ಲೋಕಸಭೆ ಚುನಾವಣೆಯ ನಂತರ ದೇಶದಲ್ಲಿ ಮೊದಲ ಬಾರಿಗೆ ಡಿಜಿಟಲ್ ಜನಗಣತಿ ನಡೆಸಬಹುದು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...