ಭಾರತದ ಪಾಸ್‌ಪೋರ್ಟ್ ನಿಯಮಗಳಲ್ಲಿ ಕೇಂದ್ರ ಸರ್ಕಾರವು ಮಹತ್ತರ ಬದಲಾವಣೆಗಳನ್ನು ತಂದಿದೆ. ಇನ್ನು ಮುಂದೆ, 2023ರ ಅಕ್ಟೋಬರ್ 1ರ ನಂತರ ಜನಿಸಿದವರಿಗೆ ಜನ್ಮ ಪ್ರಮಾಣಪತ್ರ ಕಡ್ಡಾಯವಾಗಿದೆ. ಹಳೆಯ ಅರ್ಜಿದಾರರು ಈ ಹಿಂದೆ ಬಳಸಿದ ದಾಖಲೆಗಳನ್ನು ಮುಂದುವರೆಸಬಹುದು.
ಪಾಸ್‌ಪೋರ್ಟ್‌ನಲ್ಲಿನ ವಾಸಸ್ಥಳದ ವಿಳಾಸವನ್ನು ಮುದ್ರಿಸುವುದನ್ನು ತೆಗೆದುಹಾಕಲಾಗಿದೆ. ಬದಲಾಗಿ ಬಾರ್‌ಕೋಡ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇದರಿಂದ ಭದ್ರತೆ ಮತ್ತು ಗೌಪ್ಯತೆ ಹೆಚ್ಚಾಗುತ್ತದೆ.
ಇದಲ್ಲದೆ, ಸರ್ಕಾರಿ ಅಧಿಕಾರಿಗಳಿಗೆ ಬಿಳಿ ಪಾಸ್‌ಪೋರ್ಟ್, ರಾಜತಾಂತ್ರಿಕರಿಗೆ ಕೆಂಪು ಪಾಸ್‌ಪೋರ್ಟ್ ಮತ್ತು ಸಾಮಾನ್ಯ ನಾಗರಿಕರಿಗೆ ನೀಲಿ ಪಾಸ್‌ಪೋರ್ಟ್ ನೀಡಲು ಬಣ್ಣ-ಕೋಡೆಡ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಪಾಸ್‌ಪೋರ್ಟ್‌ನಲ್ಲಿ ಪೋಷಕರ ಹೆಸರನ್ನು ಮುದ್ರಿಸುವ ಅಗತ್ಯವನ್ನು ತೆಗೆದುಹಾಕಲಾಗಿದೆ. ಏಕ ಪೋಷಕರು ಅಥವಾ ಬೇರ್ಪಟ್ಟ ಕುಟುಂಬಗಳಿಗೆ ಇದು ಸಹಾಯಕವಾಗಲಿದೆ.
ಪಾಸ್‌ಪೋರ್ಟ್ ಸೇವಾ ಕೇಂದ್ರಗಳ (ಪಿಒಪಿಎಸ್‌ಕೆ) ಸಂಖ್ಯೆಯನ್ನು 442 ರಿಂದ 600 ಕ್ಕೆ ಹೆಚ್ಚಿಸಲು ಸರ್ಕಾರವು ಯೋಜಿಸಿದೆ.