ನವದೆಹಲಿ: ಭಾರತವು 2029 ರಿಂದ 20 ವರ್ಷಗಳವರೆಗೆ ಕತಾರ್ನಿಂದ ವರ್ಷಕ್ಕೆ 7.5 ಮಿಲಿಯನ್ ಟನ್ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ಜಿ) ಖರೀದಿಸುವ ಒಪ್ಪಂದ ಮಾಡಿಕೊಂಡಿದೆ.
ವುಡ್ ಮ್ಯಾಕೆಂಝಿ ಪ್ರಕಾರ, ಕತಾರ್ ಎನರ್ಜಿ ಮತ್ತು ಪೆಟ್ರೋನೆಟ್ ನಡುವಿನ 20 ವರ್ಷಗಳ ಮಾರಾಟ ಮತ್ತು ಖರೀದಿ ಒಪ್ಪಂದದ ವಿಸ್ತರಣೆಯು ಸುಮಾರು 150 ಮಿಲಿಯನ್ ಟನ್ ಪ್ರಮಾಣವನ್ನು ಒಳಗೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಕತಾರ್ ಎನರ್ಜಿ ಚೀನಾದ ನ್ಯಾಷನಲ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಸಿನೋಪೆಕ್ನೊಂದಿಗೆ ಸಹಿ ಹಾಕಿದ 108 ಮಿಲಿಯನ್ ಟನ್ ಒಪ್ಪಂದಗಳಲ್ಲಿ ಇದು ಅತಿದೊಡ್ಡದಾಗಿದೆ.
ಗ್ಲೋಬಲ್ ಎಲ್ಎನ್ಜಿ (ಏಷ್ಯಾ) ನಿರ್ದೇಶಕ ಡೇನಿಯಲ್ ಟೋಲ್ಮನ್ ಮಾತನಾಡಿ, “ಈ ಒಪ್ಪಂದವು 2030 ರ ವೇಳೆಗೆ ತನ್ನ ಇಂಧನ ಮಿಶ್ರಣದಲ್ಲಿ ನೈಸರ್ಗಿಕ ಅನಿಲದ ಪ್ರಮಾಣವನ್ನು ಶೇಕಡಾ 15 ಕ್ಕೆ ಹೆಚ್ಚಿಸುವ ಗುರಿಯನ್ನು ಸಾಧಿಸಲು ಭಾರತಕ್ಕೆ ಸಹಾಯ ಮಾಡುತ್ತದೆ. ಪ್ರಸ್ತುತ, ಭಾರತದ ಇಂಧನ ಮಿಶ್ರಣದಲ್ಲಿ ನೈಸರ್ಗಿಕ ಅನಿಲದ ಪಾಲು ಶೇಕಡಾ 6.3 ರಷ್ಟಿದೆ ಎಂದು ತಿಳಿಸಿದ್ದಾರೆ.