ನ್ಯೂಯಾರ್ಕ್: ಮಧುಮೇಹಕ್ಕೆ ಹಲಸಿನ ಹಿಟ್ಟು ರಾಮಬಾಣವಾಗಿದೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ. ಹಲಸಿನ ಹಿಟ್ಟಿನ ಬ್ರಾಂಡ್ ಆಗಿರುವ ಜಾಕ್ ಫುಟ್ 365 ಮಧುಮೇಹ ನಿಯಂತ್ರಣ ಗುಣಲಕ್ಷಣಗಳಿಗಾಗಿ ಅಮೆರಿಕದ ಡಯಾಬಿಟಿಸ್ ಸಂಸ್ಥೆಯಿಂದ ಮಾನ್ಯತೆ ಪಡೆದುಕೊಂಡಿದೆ.
ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಹಲಸಿನಹಣ್ಣು ಔಷಧೀಯ ಗುಣಗಳನ್ನು ಹೊಂದಿದ್ದು, ಮಧುಮೇಹಿಗಳಿಗೆ ಕೂಡ ಹಲಸಿನ ಹಿಟ್ಟು ಪರಿಣಾಮಕಾರಿಯಾಗಿದೆ. ಜೇಮ್ಸ್ ಜೋಸೆಫ್ ಅವರು ಜಾಕ್ ಫುಟ್ 365 ಹೆಸರಿನಲ್ಲಿ ಇದನ್ನು ಬಿಡುಗಡೆ ಮಾಡಿದ್ದಾರೆ. ಕ್ಲಿನಿಕಲ್ ಅಧ್ಯಯನದಲ್ಲಿ ಟೈಪ್ 2 ಡಯಾಬಿಟಿಸ್ ರೋಗಿಗಳ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ ಎನ್ನುವುದು ಗೊತ್ತಾಗಿದೆ.
ಎಡಿಎ ಜರ್ನಲ್ ಡಯಾಬಿಟಿಸ್ ನಲ್ಲಿ ಈ ಕುರಿತಾದ ಮಾಹಿತಿ ಪ್ರಕಟಿಸಲಾಗಿದೆ. 24 ಪುರುಷರು 16 ಮಹಿಳೆಯರನ್ನು ಒಳಗೊಂಡ 40 ಟೈಪ್ 2 ಡಯಾಬಿಟೀಸ್ ರೋಗಿಗಳ ಮೇಲೆ ಪ್ರಯೋಗ ನಡೆಸಿದ್ದು, 12 ವಾರಗಳ ಕಾಲ ನಡೆಸಲಾದ ಅಧ್ಯಯನದಲ್ಲಿ ಹಲಸಿನ ಹಿಟ್ಟಿನಿಂದ ಡಯಾಬಿಟಿಸ್ ಕಡಿಮೆಯಾಗಿರುವುದು ಕಂಡುಬಂದಿದೆ ಎಂದು ಹೇಳಲಾಗಿದೆ.