
ನವದೆಹಲಿ: 21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯೂನಿವರ್ಸ್ ಪಟ್ಟ ಸಿಕ್ಕಿದೆ. ಭಾರತದ ಹರ್ನಾಜ್ ಸಂಧು 2021 ರ ವಿಶ್ವ ಸುಂದರಿ ಆಗಿದ್ದು, 21 ವರ್ಷಗಳ ನಂತರ ಕಿರೀಟ ತಂದಿದ್ದಾರೆ.
ಚಂಡೀಗಢದ ಹರ್ನಾಜ್ ಸಂಧು 2021 ರ ವಿಶ್ವ ಸುಂದರಿ ಆಗಿದ್ದಾರೆ. ಅವರು ಮಿಸ್ ಯೂನಿವರ್ಸ್ 2020 ರ ಕಿರೀಟವನ್ನು ಮೆಕ್ಸಿಕೋದ ಆಂಡ್ರಿಯಾ ಮೆಜಾ ಅವರಿಂದ ಪಡೆದರು.
ಹರ್ನಾಜ್ ಸಂಧು ಅವರಿಗಿಂತ ಮೊದಲು, ಲಾರಾ ದತ್ತಾ 2000 ರಲ್ಲಿ ವಿಶ್ವ ಸುಂದರಿ ಕಿರೀಟ ಪಡೆದರು. ಇಸ್ರೇಲ್‌ನಲ್ಲಿ ನಡೆಯುತ್ತಿರುವ ಈವೆಂಟ್‌ನಲ್ಲಿ ಸೌಂದರ್ಯ ರಾಣಿ ಅಸ್ಕರ್ ಪಟ್ಟವನ್ನು ಅಲಂಕರಿಸಿದ್ದಾರೆ. ಮಿಸ್ ಯೂನಿವರ್ಸ್ 2020 ಮೆಕ್ಸಿಕೋದ ಆಂಡ್ರಿಯಾ ಮೆಜಾ ಭಾವನಾತ್ಮಕವಾಗಿ ಹರ್ನಾಜ್‌ಗೆ ಕಿರೀಟವನ್ನು ತೊಡಿಸಿದ್ದಾರೆ.