ಪೆಟ್ರೋಲ್ ಬಳಕೆ ತಗ್ಗಬೇಕು, ಪರ್ಯಾಯ ಮಾರ್ಗ ಬಳಕೆ ಹೆಚ್ಚಬೇಕೆಂಬುದು ಸರ್ಕಾರದ ಆಶಯ. ಆದರೆ ದೇಶದಲ್ಲಿ ಪೆಟ್ರೋಲ್ ಬಳಕೆ ಹೆಚ್ಚುತ್ತಲೇ ಇದೆ.
ಜೂನ್‌ನಲ್ಲಿ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯು ಗಣನೀಯವಾಗಿ ಏರಿಕೆ ಕಂಡಿದೆ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಶೇ. 17.9ರಿಂದ ಶೇಕಡಾ 18.67 ಮಿಲಿಯನ್ ಟನ್‌ಗಳಿಗೆ ಏರಿದೆ ಎಂಬುದನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶದ ಅಂಕಿಅಂಶಗಳು ಎತ್ತಿ ತೋರಿಸುತ್ತಿವೆ.
2021 ರ ಇದೇ ಅವಧಿಯಲ್ಲಿ ಇಂಧನ ಬಳಕೆ 15.84 ಮಿಲಿಯನ್ ಟನ್ ಆಗಿತ್ತು. ತಿಂಗಳಿನಿಂದ ತಿಂಗಳಿಗೆ ಬಳಕೆ ಹೆಚ್ಚಾಗುತ್ತಲೇ ಇದೆ.
ದ್ರವ ಪೆಟ್ರೋಲಿಯಂ ಅನಿಲ, ವಿಮಾನದಲ್ಲಿ ಬಳಸುವ ಟರ್ಬೈನ್ ಇಂಧನ, ಡೀಸೆಲ್, ಪೆಟ್ರೋಲ್, ಲೂಬ್ರಿಕೆಂಟ್‌ಗಳು, ಗ್ರೀಸ್, ಬಿಟುಮೆನ್ ಮತ್ತು ಪೆಟ್ರೋಲಿಯಂ ಕೋಕ್ ಭಾರತ ಬಳಸುವ ಪ್ರಮುಖ ಉತ್ಪನ್ನಗಳಾಗಿವೆ.
ಒಟ್ಟು ಬಳಕೆಯ ಪ್ರಮುಖ ಭಾಗವು ಡೀಸೆಲ್‌ನಿಂದ ಬರುತ್ತದೆ. ಪೆಟ್ರೋಲ್ ಬಳಕೆಯು ಶೇ. 23.2, ಡೀಸೆಲ್ ಶೇ.23.9 ಮತ್ತು ಏವಿಯೇಷನ್ ಟರ್ಬೈನ್ ಇಂಧನ ಶೇ. 129.9 ರಷ್ಟು ಹೆಚ್ಚಾಗಿದೆ ಎಂದು ಡೇಟಾ ತೋರಿಸಿದೆ.
ಕೋವಿಡ್ ಸಾಂಕ್ರಾಮಿಕದ ನಂತರ ಆರ್ಥಿಕತೆಯ ಪುನರಾರಂಭಕ್ಕೆ ಕಾರಣವಾಗಿದೆ, ಇದು ಇಂಧನಗಳ ಬೇಡಿಕೆಯ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ, ಕೋವಿಡ್ ಕಾರಣಕ್ಕೆ ಇಂಧನಗಳ ಬೇಡಿಕೆ ಸೀಮಿತಗೊಳಿಸಿತ್ತು.