ಮಹಾರಾಷ್ಟ್ರದ ಎರಡು ಪ್ರಮುಖ ನಗರಗಳಾದ ಪುಣೆ ಮತ್ತು ಮುಂಬೈಗೆ ಸಂಪರ್ಕ ಕಲ್ಪಿಸುವ ದೇಶದ ಮೊದಲ ಡೀಲಕ್ಸ್ ರೈಲು ʼಡೆಕ್ಕನ್ ಕ್ವೀನ್ʼ ಎಕ್ಸ್‌ಪ್ರೆಸ್ ಗೆ ಬುಧವಾರ 92 ವರ್ಷ ತುಂಬಿದೆ.
ಭಾರತೀಯ ರೈಲ್ವೇಯಲ್ಲಿ ರೆಸ್ಟೋರೆಂಟ್ ಕಾರ್ ಹೊಂದಿರುವ ಏಕೈಕ ರೈಲು ಇದು. ಈಗ ಜೂನ್ 22 ರಿಂದ ಎಲ್.ಹೆಚ್.ಬಿ. ಕೋಚ್‌ಗಳೊಂದಿಗೆ ಸಂಚಾರ ನಡೆಸಲಿದೆ ಎಂದು ಸೆಂಟ್ರಲ್ ರೈಲ್ವೇಯ ಜನರಲ್ ಮ್ಯಾನೇಜರ್ ಅನಿಲ್ ಕುಮಾರ್ ಲಹೋಟಿ ತಿಳಿಸಿದ್ದಾರೆ.
ಪುಣೆ ಮತ್ತು ಮುಂಬೈನ ನಗರಗಳ ನಡುವೆ ‘ಡೆಕ್ಕನ್ ಕ್ವೀನ್’ ಜೂನ್ 1, 1930ರಂದು ಸಂಚಾರ ಆರಂಭಿಸಿತು. ಇದು ರೈಲ್ವೆಯ ಇತಿಹಾಸದಲ್ಲಿ ಒಂದು ಪ್ರಮುಖ ಹೆಗ್ಗುರುತು ಎಂದು ಹೇಳಲಾಗುತ್ತದೆ.
ಪುತ್ರನಿಂದಲೇ ಪೈಶಾಚಿಕ ಕೃತ್ಯ: ಮೊಬೈಲ್ ಕೊಡಿಸದಿದ್ದಕ್ಕೆ ತಾಯಿಯ ಕೊಲೆ
ಕೇಂದ್ರ ರೈಲ್ವೆಯ ಎರಡು ಪ್ರಮುಖ ನಗರಗಳಿಗೆ ಸೇವೆ ಸಲ್ಲಿಸಲು ರೈಲ್ವೆಯಲ್ಲಿ ಪರಿಚಯಿಸಲಾದ ಮೊದಲ ಡೀಲಕ್ಸ್ ರೈಲು ಇದು. ಆರಂಭದಲ್ಲಿ, ರೈಲನ್ನು ಏಳು ಕೋಚ್‌ಗಳ ಎರಡು ರೇಕ್‌ಗಳೊಂದಿಗೆ ಸಂಚಾರ ನಡೆಸಿತ್ತು. ಮೂಲ ರೇಕ್ ಮತ್ತು ಕೋಚ್‌ಗಳ ಅಂಡರ್‌ಫ್ರೇಮ್‌ಗಳನ್ನು ಇಂಗ್ಲೆಂಡ್‌ನಲ್ಲಿ ನಿರ್ಮಿಸಲಾಗಿದ್ದು, ಕೋಚ್ ಬಾಡಿಗಳನ್ನು ಜಿಐಪಿ ರೈಲ್ವೇಯ ಮಾತುಂಗಾ ಕಾರ್ಯಾಗಾರದಲ್ಲಿ ನಿರ್ಮಿಸಲಾಗಿದೆ.