ನವದೆಹಲಿ: ಆಗಸ್ಟ್ 2026 ರೊಳಗೆ ಭಾರತದ ಮೊದಲ ಬುಲೆಟ್ ರೈಲು ವಿಭಾಗ ಪೂರ್ಣಗೊಳ್ಳಲಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ರಾಷ್ಟ್ರೀಯ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್(NHSRCL) ಅಡಿಯಲ್ಲಿ ಭಾರತದಲ್ಲಿ ಮೊದಲ ಬುಲೆಟ್ ರೈಲು ವಿಭಾಗ ಗುಜರಾತ್‌ನ ಬಿಲಿಮೋರಾ ಮತ್ತು ಸೂರತ್ ನಡುವಿನ 50 ಕಿಮೀ ವ್ಯಾಪ್ತಿಯು ಆಗಸ್ಟ್ 2026 ರಲ್ಲಿ ಪೂರ್ಣಗೊಳ್ಳಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ರೈಲ್ವೇ ಸಚಿವರು ಹಲವಾರು ಯೋಜನೆಗಳನ್ನು ಘೋಷಿಸಿದರು. ದೇಶದ ರೈಲು ಜಾಲ ಮತ್ತು ಸೇವೆಗಳನ್ನು ಸುಧಾರಿಸಲು ಅವರು ಕವಚ್ ಸಿಸ್ಟಮ್ ಹೈಲೈಟ್ ಮಾಡಿ ಟ್ರ್ಯಾಕ್ನಲ್ಲಿ ಘರ್ಷಣೆಯಿಂದ ರಕ್ಷಿಸಲು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಎಚ್ಚರಿಕೆ ವ್ಯವಸ್ಥೆ ಇದಾಗಿದೆ. 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಭೀಕರ ಬಾಲಸೋರ್ ರೈಲು ಅಪಘಾತದ ನಂತರ ಈ ತಂತ್ರಜ್ಞಾನ ಬೆಳಕಿಗೆ ಬಂದಿತು.
ಬುಲೆಟ್ ರೈಲು ಯೋಜನೆಯ 100 ಕಿ.ಮೀ ಉದ್ದದ ವಯಡಕ್ಟ್ಸ್ 230 ಕಿಮೀ ಪೈರ್ ಕಾಮಗಾರಿ ಪೂರ್ಣಗೊಂಡಿದೆ
ನವೆಂಬರ್ 24 ರಂದು ವೈಷ್ಣವ್ ಅವರು ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ಕಾರಿಡಾರ್ ಅನ್ನು ನಿರ್ಮಿಸುವ ನಿರ್ಮಾಣ ಹಂತದಲ್ಲಿರುವ ಬುಲೆಟ್ ಟ್ರೈನ್ ಯೋಜನೆಯ ಬಗ್ಗೆ ನವೀಕರಣವನ್ನು ನೀಡಿ ಮಹತ್ವಾಕಾಂಕ್ಷೆಯ ಯೋಜನೆಗೆ 100 ಕಿಲೋಮೀಟರ್ ಮೇಲ್ಸೇತುವೆ ಮತ್ತು 230 ಕಿಲೋಮೀಟರ್ ಪೈರ್ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.
40-ಮೀಟರ್ ಉದ್ದದ ‘ಫುಲ್ ಸ್ಪ್ಯಾನ್ ಬಾಕ್ಸ್ ಗರ್ಡರ್‌ಗಳು’ ಮತ್ತು ‘ಸೆಗ್ಮೆಂಟಲ್ ಗರ್ಡರ್‌ಗಳು’, ಎನ್‌ಹೆಚ್‌ಎಸ್‌ಆರ್‌ಸಿಎಲ್ ಅನ್ನು ಪ್ರಾರಂಭಿಸುವ ಮೂಲಕ 100 ಕಿಲೋಮೀಟರ್ ವೈಯಾಡಕ್ಟ್ ಗಳ ನಿರ್ಮಾಣದ ಮೈಲಿಗಲ್ಲು ಸಾಧಿಸಲಾಗಿದೆ.
ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ ಕಾರಿಡಾರ್ ಯೋಜನೆಯ ಒಟ್ಟು ವೆಚ್ಚ 1.08 ಲಕ್ಷ ಕೋಟಿ ರೂ. ಷೇರುದಾರರ ಮಾದರಿಯ ಪ್ರಕಾರ, ಕೇಂದ್ರ ಸರ್ಕಾರವು ಎನ್‌ಹೆಚ್‌ಎಸ್‌ಆರ್‌ಸಿಎಲ್‌ಗೆ 10,000 ಕೋಟಿ ರೂ., ಗುಜರಾತ್ ಮತ್ತು ಮಹಾರಾಷ್ಟ್ರ ತಲಾ 5,000 ಕೋಟಿ ರೂ. ಉಳಿದ ವೆಚ್ಚವನ್ನು ಜಪಾನ್‌ನಿಂದ ಶೇಕಡಾ 0.1 ಬಡ್ಡಿಯಲ್ಲಿ ಸಾಲದ ಮೂಲಕ ನೀಡಲಾಗುತ್ತದೆ.