![](https://kannadadunia.com/wp-content/uploads/2021/11/FDmG0MbVQAEK4MQ.jpg)
ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ, ಇಂದು ದೇಶದಲ್ಲಿ ಡಿಜಿಟಲ್ ವಹಿವಾಟು ಹೇಗೆ ಪ್ರಚಲಿತವಾಗಿದೆ ಎಂಬುದನ್ನು ಚಿತ್ರಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುವ ಬೀದಿ ಆಹಾರ ಮಾರಾಟಗಾರರ ಚಿತ್ರವನ್ನು ಮರು ಟ್ವೀಟ್ ಮಾಡಿದ್ದಾರೆ. ಮಾರಾಟಗಾರನು ತನ್ನ ಆಹಾರದ ಕಾರ್ಟ್ಗೆ ಪೇಟಿಎಂ ಕ್ಯೂಆರ್ ಕೋಡ್ ಅನ್ನು ಅಳವಡಿಸಿರುವ ಫೋಟೋವನ್ನು ಉದ್ಯಮಿ ಹಂಚಿಕೊಂಡಿದ್ದಾರೆ. ಇಂದಿನ ದಿನಗಳಲ್ಲಿ ಇದು ಸಾಮಾನ್ಯವಾಗಿದೆ. ಆದರೆ ಕೆಲವು ವರ್ಷಗಳ ಹಿಂದೆ ಡಿಜಿಟಲ್ ಪಾವತಿ ಅಂದ್ರೆ ಎಲ್ಲರಲ್ಲೂ ಅಚ್ಚರಿ ತಂದಿತ್ತು.
ಕಾಣಿಕೆ ಹುಂಡಿಯಲ್ಲಿ 83 ಲಕ್ಷ ರೂ. ಸೇರಿ ಹಾಸನಾಂಬ ದೇವಿ ಜಾತ್ರೆಯಲ್ಲಿ 1.54 ಕೋಟಿ ರೂ. ಸಂಗ್ರಹ
2016 ರಲ್ಲಿ ₹ 500 ಮತ್ತು ₹ 1,000 ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ಅಮಾನ್ಯಗೊಳಿಸಿದ ನಂತರ, ಡಿಜಿಟಲ್ ಪಾವತಿ ನಿಧಾನಕ್ಕೆ ಅಸ್ತಿತ್ವಕ್ಕೆ ಬಂದು, ಇಂದು ಮನೆಮಾತಾಗಿದೆ. ಹೆಚ್ಚಿನ ಜನರಿಗೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳು ಅಥವಾ ಪೇಟಿಎಂ ನಂತಹ ಡಿಜಿಟಲ್ ವ್ಯಾಲೆಟ್ಗಳನ್ನು ಬಳಸುವುದನ್ನು ಬಿಟ್ಟು ಬೇರೆ ಆಯ್ಕೆ ಇಲ್ಲದ ಕಾರಣ ಆ ಸಮಯದಲ್ಲಿ ಎಲೆಕ್ಟ್ರಾನಿಕ್ ವಹಿವಾಟುಗಳು ತೀವ್ರವಾಗಿ ಹೆಚ್ಚಾಗಿದ್ದವು.
ಇನ್ನು ಶನಿವಾರದಂದು, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಕೂಡ ಭಾರತದಲ್ಲಿ ಡಿಜಿಟಲ್ ಪಾವತಿ ಎಷ್ಟು ದೊಡ್ಡ ಮಟ್ಟದಲ್ಲಿ ಪರಿವರ್ತನೆಯಾಗಿದೆ ಎಂಬುದರ ಬಗ್ಗೆ ಒಂದು ಸಣ್ಣ ವಿಡಿಯೋವನ್ನು ಹಂಚಿಕೊಂಡಿದ್ದರು.